ತುಮಕೂರು: ಕನ್ನಡ ನಾಡು ನುಡಿ ಸಂರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗನೂ ಕಂಕಣ ಬದ್ದರಾಗುವಂತೆ ನಗರದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಕರೆ ನೀಡಿದರು.
ನಗರದ ಉಪ್ಪಾರಹಳ್ಳಿ ಆಟೋ ನಿಲ್ದಾಣದಲ್ಲಿ ಉಪ್ಪಾರಹಳ್ಳಿ ನಾಗರಿಕ ಹಿತರಕ್ಷಣಾ ಸಮಿತಿ, ಕಟ್ಟಡ ಕಾರ್ಮಿಕರ ಸಂಘ ಹಾಗೂ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬ ಕನ್ನಡಿಗನೂ ಕೆಚ್ಚದೆಯ ಕನ್ನಡಿಗನಾಗಿ ನಾಡು ನುಡಿ ನೆಲ ಜಲವನ್ನು ಸಂರಕ್ಷಸುವ ಕಾರ್ಯ ಮಾಡುವ ಸಂಕಲ್ಪ ತೊಟ್ಟು ರಾಜ್ಯದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಅಂತರಾಳದಿಂದ ನಾಡಗೌರವವಿಟ್ಟು ಈ ಮಣ್ಣಿನ ಋಣ ತೀರಿಸಬೇಕು. ಎಂತಹುದೇ ಸಂದರ್ಭದಲ್ಲಿಯೂ ನಮ್ಮ ನಾಡ ರಕ್ಷಣೆಗಾಗಿ ನಮ್ಮನ್ನು ನಾವು ಮೀಸಲಿಟ್ಟು ತಾಯಿ ಭುವನೇಶ್ವರಿಯ ರಥವನ್ನು ನಿತ್ಯ ಎಳೆಯುವುದರ ಮೂಲಕ ಪ್ರತೀ ದಿನ ನಿತ್ಯೋತ್ಸವವನ್ನು ಆಚರಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಮಾರ್ಕೆಟ್ ಕುಮಾರ್, ಶಂಕರ್, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿ: ರಾಜೇಶ್ ರಂಗನಾಥ್
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700