ಪಾವಗಡ: ತಾಲೂಕಿನ ಶ್ರೀ ಕ್ಷೇತ್ರ ನಾಗಲಮಡಿಕೆ ಸುಬ್ರಮಣ್ಯಸ್ವಾಮಿ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ನಡೆಯಬೇಕಾಗಿತ್ತು. ಆದರೆ ಕೊರೊನಾ ಮೂರನೇ ಅಲೆಯ ಭೀತಿಯಿಂದ ಈ ವರ್ಷ ತಾಲೂಕು ಆಡಳಿತ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯನ್ನು ರದ್ದುಪಡಿಸಲಾಗಿತ್ತು.
ದೇವಸ್ಥಾನದಲ್ಲಿ ಪೂಜೆ ಅಭಿಷೇಕ ನಡೆದರು ಭಕ್ತಾದಿಗಳಿಗೆ ಅವಕಾಶ ನೀಡಲಾಗಿರಲಿಲ್ಲ. ಇನ್ನು ದೇವಸ್ಥಾನದಲ್ಲಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ರದ್ದಾಗಿದೆ ಎಂದು ಮಾಹಿತಿಯನ್ನು ತಿಳಿಯದ ಕೆಲವು ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿದ್ದರು. ಆದರೆ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದರಿಂದ ಯಾವುದೆ ಭಕ್ತಾದಿಗಳಿಗೆ ಅವಕಾಶ ನೀಡಲಾಗಲಿಲ್ಲ.
ದೂರದಿಂದ ಬಂದಂತಹ ಭಕ್ತಾದಿಗಳು ರಸ್ತೆಯ ಬದಿಯಲ್ಲಿರುವ ರಕ್ಷಣಾ ಗೋಡೆಗೆ ತೆಂಗಿನಕಾಯಿ ಒಡೆದು ಹೂ ಹಾಕಿ ದಾರಿಯಿಂದಲೇ ಸುಬ್ರಮಣ್ಯ ಸ್ವಾಮಿ ಕೈಮುಗಿದು ಹಿಂದೆ ತಿರುಗಿ ಹೋಗಿರುವುದು ಈ ವೇಳೆ ಕಂಡುಬಂದಿದೆ.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy