ತುಮಕೂರು: ಚೇಳೂರು–ತುಮಕೂರು ಮಾರ್ಗದ ಮುಖ್ಯ ರಸ್ತೆ ಅವ್ಯವಸ್ಥೆ ಬಗ್ಗೆ ನಮ್ಮ ತುಮಕೂರು ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೀಗ ರಸ್ತೆ ದುರಸ್ತಿ ಕೆಲಸ ಆರಂಭಿಸಿದ್ದು, ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯವನ್ನ ಒದಗಿಸುವಲ್ಲಿ ಮತ್ತೊಮ್ಮೆ ನಮ್ಮತುಮಕೂರು ವರದಿಯು ಸಹಕಾರಿಯಾಗಿದೆ.
ಚೇಳೂರು—ತುಮಕೂರು ರಸ್ತೆ ಅವ್ಯವಸ್ಥೆ ಬಗ್ಗೆ ನಮ್ಮತುಮಕೂರು “ರಸ್ತೆ ಗುಂಡಿಯೊಳಗೋ, ಗುಂಡಿಯೇ ರಸ್ತೆಯೋ? | ಚೇಳೂರು–ತುಮಕೂರು ಮುಖ್ಯ ರಸ್ತೆ ಅವ್ಯವಸ್ಥೆ” ಶೀರ್ಷಿಕೆಯಡಿ ಸವಿವರವಾದ ವರದಿ ಪ್ರಕಟಿಸಿ, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯನ್ನು ಎಚ್ಚರಿಸಿತ್ತು. ಈ ವರದಿಯ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಗೆ ಟಾರು ಹಾಕುವ ಮೂಲಕ ರಸ್ತೆ ದುರಸ್ತಿ ಮಾಡಿದ್ದು, ಸಾರ್ವಜನಿಕರು ನೆಮ್ಮದಿಯಿಂದ ವಾಹನ ಚಲಾಯಿಸಿಕೊಂಡು ಪ್ರಯಾಣಿಸಲು ಸಹಕಾರಿಯಾಗಿದೆ.
ಚೇಳೂರು-ತುಮಕೂರು ಮಾರ್ಗದ ಮುಖ್ಯ ರಸ್ತೆಯ ಅವ್ಯವಸ್ಥೆಗೆ ತಾತ್ಕಾಲಿಕ ಮುಕ್ತಿದೊರಕಿದೆ. ರಸ್ತೆ ಹಾನಿಗೀಡಾದ ಪ್ರದೇಶಗಳಲ್ಲಿ ರಸ್ತೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಸಾರ್ವಜನಿಕರಿಗೆ ಗುಣಮಟ್ಟದ ರಸ್ತೆಯನ್ನು ದೊರಕಿಸಿಕೊಡುವಲ್ಲಿ ನಮ್ಮ ತುಮಕೂರು ವರದಿಯು ಸಹಕಾರಿಯಾಗಿದೆ.
ವರದಿ: ಗಣೇಶ್, ಮಾರನಹಳ್ಳಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4