ತುಮಕೂರು: ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಂಸ್ಥೆ ವತಿಯಿಂದ ನೂತನ ಜಿಲ್ಲಾ ಸಮಿತಿ ರಚನೆ ಸಭೆಯು ಬಿಎಚ್ ರಸ್ತೆಯ ಸಿ ಏನ್ ವಿ ಚೇಂಬರ್ಸ್ ನ ಸಭಾಂಗಣದಲ್ಲಿ ನಡೆಯಿತು.
ದೇಶದಲ್ಲಿ ಸುಮಾರು 900ಕ್ಕೂ ಹೆಚ್ಚು ಮಾನವ ಹಕ್ಕುಗಳ ಸಂಘಗಳಿವೆ ಚಿಕ್ಕಮಗಳೂರಿನಲ್ಲಿ ಅನಧಿಕೃತವಾಗಿದ್ದ ಮನೆ ಕಳೆದುಕೊಂಡವರಿಗೆ ಈ ಸಂಸ್ಥೆಯು ಮನೆ ಕಟ್ಟಿಸಿ ಕೊಟ್ಟಿದೆ. ಬಾಲಕಾರ್ಮಿಕರನ್ನು ರಕ್ಷಿಸಿ ಅಕ್ರಮ ಮೈನಿಂಗ್ ಗಣಿಗಾರಿಕೆ ವಿಚಾರದಲ್ಲಿ ಎರಡು ಕಡೆ ಮೇಲಾಧಿಕಾರಿಗಳಿಂದ ಗಣಿಗಾರಿಕೆಯನ್ನು ನಿಲ್ಲಿಸಲಾಗಿರುತ್ತದೆ.
ಕಾನೂನು ಸಲಹೆಗಾರರಾದ ದೀಪಕ್ ಡಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಥೆಯ ರಿಜಿಸ್ಟ್ರೇಷನ್ ನಂಬರ್ ಅಳವಡಿಸದೆ ಇರುವುದು ಕಾಣುತ್ತಿದ್ದು ಇದು ಸಂಘದ ನೋಂದಣಿ ಬಗ್ಗೆ ಅನುಮಾನಕ್ಕೆ ಆಸ್ಪದ ಆಗುತ್ತದೆ ಆದ್ದರಿಂದ ನೊಂದಣಿ ಸಂಖ್ಯೆಯನ್ನು ಇನ್ನು ಮುಂದೆ ದಾಖಲಿಸಿ ಎಂದರು.
ರಾಜ್ಯ ಕಾರ್ಯಧ್ಯಕ್ಷ, ಕಾನೂನು ಸಲಹೆಗಾರ ಅನಿಲ್ ಕುಮಾರ್ ಉದ್ಘಾಟನೆ ನಂತರ ಮಾತನಾಡಿ, ಅಂಬೇಡ್ಕರ್ ರವರುನೀಡಿದ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ, ಧಾರ್ಮಿಕ ಸ್ವಾತಂತ್ರ್ಯ, ಶೈಕ್ಷಣಿಕ ಸ್ವಾತಂತ್ರ್ಯ ಸಂವಿಧಾನಿಕವಾಗಿ, NHRIC ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಧಾರವಾಡ ಮತ್ತು ಕಲ್ಬುರ್ಗಿ ಹೈಕೋರ್ಟ್ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿದಾವೆಗಳನ್ನು ಹೂಡಲು ಸರ್ಕಾರ ಅನುಮಾಡಿಕೊಟ್ಟಿದೆ. ಇದರಿಂದ ಸಾರ್ವಜನಿಕರುಈ ಸೌಲಭ್ಯವನ್ನು ಉಪಯೋಗಿಸಬೇಕು, ಬಾಕಿ ಉಳಿದ 72,000 ಕೇಸುಗಳನ್ನು ಬೇಗ ಮುಗಿಸಿಕೊಡಲು ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷರಾದ ಸಂತೋಷ್ ಮಾತನಾಡಿ, ತುಮಕೂರಿನ ಜನತೆಗೆ ನೆರವು ಆಗುವಂತೆ ಕರ್ನಾಟಕವನ್ನುಆಗುವಂತೆ ಕರ್ನಾಟಕ ಮಾನವ ಹಕ್ಕುಗಳ ತನಿಖಾ ಸಂಸ್ಥೆಯು ತುಮಕೂರಿನಲ್ಲಿ ಸಿದ್ದಪಡಿಸಿ ಕಾರ್ಯನಿರ್ವಹಿಸುವಂತೆ ನೂತನ ಸಮಿತಿಗೆ ತಿಳಿಸಿದರು.
ಉಪಾಧ್ಯಕ್ಷರಾದ ಮಹಾದೇವ್, ಗೌರವಾಧ್ಯಕ್ಷರಾದ ರವಿಕುಮಾರ್, ರಾಜ್ಯ ಕಾರ್ಯದರ್ಶಿಯಾದ ಅನಿಲ್ ಕುಮಾರ್, ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಕಾರ್ತಿಕ್, ಜಿ.ಎನ್. ರಾಜುಗೌಡ, ಚಂದ್ರಶೇಖರ್, ಪ್ರವೀಣ್ ಗೌಡ ,ಕಿರಣ್ ಕುಮಾರ್, ಕೆ.ವೆಂಕಟೇಶ್, ಅಭಿಲಾಶ್, ಡಿಸ್ಟ್ರಿಕ್ಟ್ ವೈಸ್ ಪ್ರೆಸಿಡೆಂಟ್, ಸೆಕ್ರೆಟರಿ ಮಂಜುನಾಥ್, ಹೆಚ್.ಎಸ್.ಜಯಣ್ಣ, ಎಚ್.ಸಿ ಮಂಜುನಾಥ, ಕಿರಣ್ ಕುಮಾರ್, ಅರ್ಬಸ್ ಖಾನ್ ಇನ್ನು ಮುಂತಾದವರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q