ತುಮಕೂರು: ವಿಜ್ಞಾನ ಬಿಂದು–ಮ್ಯಾಥ್ ಲ್ಯಾಬ್ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಡಿಸೆಂಬರ್ 21 ಭಾನುವಾರ ಬೆಳಿಗ್ಗೆ 9:30ರಿಂದ 11:30ರವರೆಗೆ ಸರ್ವೋದಯ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತ-ವಿಜ್ಞಾನ ಒಲಂಪಿಯಾಡ್ ಆಯೋಜಿಸಿದೆ.
1 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ. 8, 9, ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಒಲಂಪಿಯಾಡ್ ನಡೆಯಲಿದೆ. ಆಸಕ್ತರು https:// shorturl.at/Fopil ಲಿಂಕ್ ಅಥವಾ ವಾಟ್ಸಾಪ್ ಸಂಖ್ಯೆ 8660587150ರಲ್ಲಿ ನೋಂದಾಯಿಸಿಕೊಳ್ಳಲು ಡಿ.18 ಕೊನೆ ದಿನ ಆಗಿರುತ್ತದೆ.
ಗಣಿತ, ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿ, ಸರಳತೆಯಿಂದ ಸಂತಸಗೊಳಿಸುವುದು, ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸ್ಪರ್ಧಾತ್ಮಕ ಕಲಿಕೆಗೆ ಸಹಕರಿಸುವುದು, ಸಮಸ್ಯೆಗಳನ್ನು ಕಾತುರತೆಯಿಂದ ಸುಲಭವಾಗಿ ಬಿಡಿಸಲು ಮಕ್ಕಳಲ್ಲಿ ವಿಶ್ಲೇಷಣಾ ಸಾಮರ್ಥ್ಯ, ಆಲೋಚನಾ ಕ್ರಮಗಳನ್ನು ಉಂಟುಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಾಲಾ ಹಂತದಿಂದಲೇ ಸಿದ್ಧಗೊಳಿಸುವುದು ಒಲಂಪಿಯಾಡ್ ಉದ್ದೇಶ. ಶಿಕ್ಷಣ ಇಲಾಖೆಯ ಪಠ್ಯಕ್ರಮ ಆಧಾರದಲ್ಲಿ ತರಗತಿವಾರು ಪ್ರಶ್ನೆಗಳನ್ನು ನೀಡಲಾಗುವುದು.
ಒಲಂಪಿಯಾಡ್ ವಿಜೇತರಿಗೆ ಬಹುಮಾನ, ವಿಜ್ಞಾನ ಬಿಂದು ಚಿಲ್ಡನ್ಸ್ ಕ್ಲಬ್ –ಮ್ಯಾಥ್ ಲ್ಯಾಬ್ ಚಟುವಟಿಕೆಗಳಿಗೆ ಒಂದು ವರ್ಷ ಉಚಿತ ಸದಸ್ಯತ್ವ, ರಾಜ್ಯ ಮತ್ತು ರಾಷ್ಟ್ರಮಟ್ಟದ ಒಲಂಪಿಯಾಡ್‌ಗಳಿಗೆ ಮಾರ್ಗದರ್ಶನ ನೀಡಲಾಗುವುದು. ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವುದು. ಮಾಹಿತಿಗೆ ಎಸ್. ರವಿಶಂಕರ್ ಅವರನ್ನು 8660587150ರಲ್ಲಿ ಸಂಪರ್ಕಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


