ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಿಲುಕುರಿಕೆ ಗ್ರಾಮದ ಸರ್ಕಾರಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯು ಶನಿವಾರ ಜರುಗಿತು..
ಹಾಲು ಉತ್ಪಾದಕರ ಸಹಕಾರ ಸಂಘ ಗ್ರಾಮ ಘಟಕದ ನೂತನ ಅಧ್ಯಕ್ಷರಾಗಿ ಶೈಲ ರಂಗನಾಥ್ ಎನ್.ಸಿ. ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀರಂಗಯ್ಯ ಎನ್.ಆರ್. ರವರು ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಗೃಹ ಸಚಿವ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ಆಯ್ಕೆಯಾದ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಮತ್ತು ಎಲ್ಲ ನಿರ್ದೇಶಕರುಗಳಿಗೆ ಶುಭ ಕೋರಿ ಅಭಿನಂದಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘ ನವಿಲುಕುರಿಕೆ ಗ್ರಾಮ ನೂತನ ನಿರ್ದೇಶಕರುಗಳಾಗಿ ನರಸಿಂಹಮೂರ್ತಿ ಎನ್.ಡಿ., ಅಂಜನಾಚಾರ್, ಕೃಷ್ಣಮೂರ್ತಿ, ಜೈ ದೀಪ, ಮಲ್ಲಿಕಾರ್ಜುನಯ್ಯ, ರಂಗಯ್ಯ ಡಿ., ಚೇತನ ಮೋಹನ್ ಕುಮಾರ್, ಸಂಧ್ಯಾ ಅನಿಲ್ ಕುಮಾರ್, ಜಯರಾಮಯ್ಯ, ಚಿಕ್ಕ ರಂಗಯ್ಯ, ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ..
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೈಲ ರಂಗನಾಥ ಮಾತನಾಡಿ, ಸಹಕಾರ ಸಂಘದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ, ನೂತನ ಕಟ್ಟಡಕ್ಕೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತೇವೆ. ರೈತರ ಸಮಗ್ರ ಅಭಿವೃದ್ಧಿಗೆ ಈ ನೂತನ ಆಯ್ಕೆ ಕಮಿಟಿಯು ಪ್ರಾಮಾಣಿಕ ಸೇವೆ ಮಾಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯಾದ ಶೈಲಜಾ ರಾಮಚಂದ್ರಯ್ಯ, ಗ್ರಾಮಸ್ಥರಾದ ರಂಗಶಾಮಯ್ಯ ಎಂ,ಮಾರುತಿ ಎನ್ ಎ,ನಾಗರಾಜು ಎನ್ ಸಿ, ಕಾಮಣ್ಣ ಎನ್.ಡಿ., ರಂಗಾಶಾಮಯ್ಯ, ರವಿಕುಮಾರ್ ಸಿ. ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx