ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ (Share). ಯುವಕ ಮತ್ತು ಯುವತಿಯಿಬ್ಬರು ನಾಯಿಯೊಂದಕ್ಕೆ ಹಿಂಸಿಸುವ ವಿಡಿಯೋ ಇದಾಗಿದೆ.
ವಿಡಿಯೋದಲ್ಲಿ ಓರ್ವ ಯುವಕ ಮತ್ತು ಯುವತಿ ಬೀದಿ ನಾಯಿ ಮರಿಯನ್ನು ಅದರ ಹಿಂಗಾಲುಗಳನ್ನು ಹಿಡಿದು ಆಟಿಕೆಯಂತೆ ಜೋಕಾಲಿ ಮಾಡಿ ಹಿಂಸಿಸುವುದನ್ನು ನೋಡಬಹುದು.
ಅಲ್ಲಿಯೇ ಇರುವ ಮಂಗಗಳನ್ನು ಹೆದರಿಸಲು ನಾಯಿ ಮರಿಯನ್ನು ಅವುಗಳತ್ತ ಎಸೆದಂತೆ ಮಾಡುತ್ತಾನೆ. ನಂತರ ಅದನ್ನು ತಲೆಕೆಳಗಾಗಿ ಹಿಡಿಯುತ್ತಾನೆ. ಆನಂತರ ಇಬ್ಬರೂ ಕೇಕೆ ಹಾಕಿ ನಗುವುದನ್ನು ಕಾಣಬಹುದು.
ಕೊನೆಗೆ ವಿಚಿತ್ರ ಎಂಬಂತೆ ಯುವತಿ ನಾಯಿಯನ್ನು ಮುದ್ದಿಸುತ್ತಾಳೆ. ಈ ವಿಚಿತ್ರ ವರ್ತನೆ ನೆಟ್ಟಿಗರನ್ನು ಕೆರಳಿಸಿದೆ. ಇಬ್ಬರಿಗೂ ಕಠಿಣ ಶಿಕ್ಷೆ (Punishment) ವಿಧಿಸಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಇವರು ಅದೆಷ್ಟು ಕ್ರೂರಿಗಳಾಗಿರಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy