ತುಮಕೂರು: ಬೆಂಗಳೂರಿನಲ್ಲಿ ಅಪಾಯಕಾರಿಯಾದ ಡ್ರಗ್ಸ ಪತ್ತೆಯಾಗಿದ್ದು, ಅದು ಎಲ್ಲೆಡೆ ವ್ಯಾಪಿಸುವ ಆತಂಕವಿದೆ ಎಂದು ಚಿತ್ರನಟ ದುನಿಯಾ ವಿಜಯ್ ತಿಳಿಸಿದ್ದಾರೆ.
ಭೀಮ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಮಾತು ಕತೆ ಮಾಡುವ ಸಂದರ್ಭದಲ್ಲಿ ಈ ವಿಷಯವನ್ನು ಸ್ವಾಮೀಜಿಯ ಬಳಿ ಹೇಳಿಕೊಂಡು ಆತಂಕ ವ್ಯಕ್ತಪಡಿಸಿದರು.
ಈ ಡ್ರಗ್ ಅನ್ನು ನಾನು ಕಂಡುಹಿಡಿದಿದ್ದೇನೆ, ಅದು ಕರ್ನಾಟಕದದ್ಯಂತ ವ್ಯಾಪಿಸಲಿದೆ ಎಲ್ಲೆಡೆ ವ್ಯಾಪಿಸುವುದನ್ನು ನಿಯಂತ್ರಿಸಬೇಕಿದೆ. ಆ ಡ್ರಗ್ ಅನ್ನು ಅವರವರೇ ಕಂಡುಹಿಡಿದುಕೊಂಡು ಬಳಸುತ್ತಿದ್ದಾರೆ ಎಂದು ಹೇಳಿದರು.
ಅಲ್ಲದೇ ತಮ್ಮ ಮೊಬೈಲ್ ನಲ್ಲಿ ಈ ಡ್ರಗ್ಸ್ ಕುರಿತದ ಕೆಲವೊಂದು ಮಾಹಿತಿಯನ್ನು ಸ್ವಾಮೀಜಿಯವರೊಂದಿಗೆ ಹಂಚಿಕೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296