ಬೆಂಗಳೂರು: ಡಿಸೆಂಬರ್ 28ರಿಂದ ನೈಟ್ ಕರ್ಫ್ಯೂ ಜಾರಿಗೆ ಹೊಟೇಲ್ ಮಾಲಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಕೊರೊನಾ ಬಳಿಕ ಹೊಟೇಲ್ ಉದ್ಯಮ ಸಂಪೂರ್ಣವಾಗಿ ನೆಲ ಕಚ್ಚಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಈ ನಡುವೆ ನೈಟ್ ಕರ್ಫ್ಯೂ ನ್ಯಾಯ ಸಮ್ಮತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೂ ಹೊಟೇಲ್ ಗಳ ಮೇಲೆ ನಿರ್ಬಂಧ ಹಾಕಿರುವುದಕ್ಕೆ ಗ್ರಾಹಕರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ನೈಟ್ ಕೆಲಸ ಮುಗಿಸಿಕೊಂಡು ಬರುವವರಿಗೆ ಊಟದ ಸಮಸ್ಯೆಯಾಗುತ್ತೆ. ಸರ್ಕಾರದ ಈ ರೂಲ್ಸ್ನಿಂದ ರಾತ್ರಿ 9ಗಂಟೆಯೊಳಗೆ ಊಟ ಮುಗಿಸಿಕೊಳ್ಳಬೇಕು. ಈ ನಿರ್ಧಾರದಿಂದ ಪ್ರಯೋಜನವೂ ಇದೆ, ಸಮಸ್ಯೆಯೂ ಆಗುತ್ತೆ ಎಂದು ಗ್ರಾಹಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸರ್ಕಾರ ಹೋಟೆಲ್ ಉದ್ಯಮದ ಸಮಸ್ಯೆ ಅರ್ಥಮಾಡಿಕೊಳ್ಳಬೇಕು. ನೈಟ್ ಕರ್ಫ್ಯೂನಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy