ಸಾರಿಗೆ ಇಲಾಖೆಯು ಇತ್ತೀಚಿನ ದಿನಗಳಲ್ಲಿ ಭಾರೀ ಕಠಿಣವಾದಂತಹ ಟ್ರಾಫಿಕ್ ನಿಯಮಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಸಿಗ್ನಲ್ ಜಂಪ್ ಮಾಡಿದ್ರಂತೂ ದೊಡ್ಡಮೊತ್ತದ ದಂಡವನ್ನೇ ವಿಧಿಸುತ್ತದೆ..
ಆದರೆ ಸಿಗ್ನಲ್ ಇರುವ ಸಂದರ್ಭದಲ್ಲಿ ಆಂಬುಲೆನ್ಸ್ ಬಂದಾಗ ಇತರ ವಾಹನಗಳು ದಾರಿ ಮಾಡಿಕೊಡಲು ಸಿಗ್ನಲ್ ಜಂಪ್ ಮಾಡಿದ್ರೆ ಅವುಗಳಿಗೆ ದಂಡ ವಿಧಿಸದಿರಲು ಪೋಲಿಸ್ ಇಲಾಖೆಯು ನಿರ್ಧರಿಸಿದೆ. ಏಕೆಂದರೆ ಹಿಂದಿನಿಂದ ಆಂಬುಲೆನ್ಸ್ ಬಂದಾಗ ಮುಂದಿರುವ ವಾಹನಗಳಿಗೆ ಬೇರೆಲ್ಲೂ ಹೋಗಲು ಜಾಗ ಇರೋದಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಅವುಗಳು ಸಿಗ್ನಲ್ ಜಂಪ್ ಮಾಡಲೇ ಬೇಕು, ನಿಯಮ ಮುರಿಯಲೇ ಬೇಕು. ಹೀಗಾಗಿ ಇದು ತಪ್ಪಾಗಿ ಪರಿಣಮಿಸುವುದಿಲ್ಲ. ಇದರಿಂದ ಸಾರಿಗೆ ಇಲಾಖೆಯು ಈ ಹೊಸ ಸುದ್ದಿಯನ್ನು ಪ್ರಕಟಿಸಿದ್ದು, ಆಂಬುಲೆನ್ಸ್ ಗೆ ದಾರಿಮಾಡಿಕೊಡಲು ಸಿಗ್ನಲ್ ಜಂಪ್ ಮಾಡಿದ್ರೆ ಯಾವುದೇ ಕಾರಣಕ್ಕೂ ಅಂತಹ ವಾಹನಗಳಿಗೆ ದಂಡ ವಿಧಿಸುವುದಿಲ್ಲ ಎಂದು ಹೇಳಿದೆ.
ಅಲ್ಲದೆ ನೀವು ಆಂಬುಲೆನ್ಸ್ ಬಂದಾಗ ದಾರಿ ಬಿಡಲು ಸಿಗ್ನಲ್ ಜಂಪ್ ಮಾಡಿದಾಗ ಒಂದು ವೇಳೆ ಪೋಲೀಸರು ದಂಡ ಹಾಕಿದ್ರೆ ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್ಮೆಂಟ್ ಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿ ದಂಡವನ್ನು ತೆರವುಮಾಡಿಕೊಳ್ಳಬಹುದು. ಅಥವಾ ಕರ್ನಾಟಕ ಸ್ಟೇಟ್ ಪೋಲೀಸ್ ಆಪ್ ಮೂಲಕ ದೂರನ್ನು ಕೂಡ ದಾಖಲಿಸಬಹುದು ಎಂದು ಪೋಲೀಸ್ ಜಂಟಿ ಆಯುಕ್ತರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA