ತಿಪಟೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದ ಅತ್ತ ಗೃಹಲಕ್ಷ್ಮಿ ಹಣವೂ ಇಲ್ಲ, ಇತ್ತ ವೃದ್ದಾಪ್ಯ ವೇತನವೂ ಇಲ್ಲದೇ ಹುಚ್ಚಮ್ಮ ಎನ್ನೋ ಅಯೋವೃದ್ದೆ ತುತ್ತು ಅನ್ನಕ್ಕಾಗಿ ಅಲೆಯುವಂತಾಗಿದೆ.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ವಾಸಿ ಸುಮಾರು 80 ವರ್ಷ ವಯಸ್ಸಿನ ವೃದ್ದೆ ಹುಚ್ಚಮ್ಮ ಅಂಗವಿಕಲೆಯಾಗಿದ್ದು, ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾರೆ. ಇವರಿಗೆ 3 ಜನ ಮಕ್ಕಳಿದ್ದರೂ ಸಾಕದೆ ಇರುವ ಕಾರಣ ವೃದ್ದೆ, ಪ್ರತ್ಯೇಕವಾಗಿ ಗುಡಿಸಲಿನಲ್ಲಿ ವಾಸವಾಗಿದ್ದಾರೆ.
ದುಡಿದು ತಿನ್ನಲು ಶಕ್ತಿಇಲ್ಲ, ಮಕ್ಕಳ ಆಸರೆಯೂ ಇಲ್ಲದೆ ಬದುಕು ಸಾಗಿಸುವ ಹುಚ್ಚಮ್ಮ ಬಿನ್ ದುರ್ಗಯ್ಯ ಅನ್ನಭಾಗ್ಯ ಪಡಿದರ ಧಾನ್ಯದಿಂದ ಜೀವನ ಸಾಗಿಸುತ್ತಿದ್ದರು. ಆದರೇ
ಅಧಿಕಾರಿಗಳ ಯಡವಟ್ಟಿನಿಂದ ಕಳೆದ ಒಂದು ವರ್ಷದಿಂದ ವೃದ್ದಾಪ್ಯವೇತನ ಹಾಗೂ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣವೂ ಸಿಗದೆ ವೃದ್ಧೆ ಪರದಾಡುವಂತಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಲ್ಕುರಿಕೆ ಗ್ರಾಮಪಂಚಾಯ್ತಿ, ಪೋಸ್ಟ್ ಆಫೀಸ್ ಗೆ ಪ್ರತಿನಿತ್ಯ ಅಲೆದು ಈ ವೃದ್ಧೆ ಸುಸ್ತಾಗಿದ್ದಾರೆ. ಇದೀಗ ಯಾವುದೇ ಹಣ ಇಲ್ಲದ ಕಾರಣ ಇವರು ಭಿಕ್ಷಾಟನೆ ಮಾಡುವಂತಾಗಿದೆ.
ಹತ್ತಾರು ಭಾರೀ ಕಚೇರಿಯಿಂದ ಕಚೇರಿಗೆ ಅಲೆದು ಅಧಿಕಾರಿಗಳನ್ನ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಹಣಬಂದಿದೆಯ ಎಂದು ಅಂಚೆಕಚೇರಿಗೆ ಹೋದರೆ ಮಾನವೀಯತೆ ಮರೆತ ಅಂಚೆಕಚೇರಿ ಸಿಬ್ಬಂದಿ ಕಚೇರಿಯಿಂದ ಆಚೆ ಕಳುಹಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ಬಡವರಿ ವೃದ್ದರಿಗೆ ಸಹಾಯಮಾಡಬೇಕಾದ ಅಧಿಕಾರಿಗಳು ಕನಿಷ್ಠಮಾನವೀಯತೆ ಇಲ್ಲದೇ ವರ್ತಿಸುತ್ತಿರುವುದು ಸಾರ್ವಜನಿಕರ ಹಿಡಿಶಾಪಕ್ಕೆ ಕಾರಣವಾಗಿದ್ದು, ತಾಲ್ಲೂಕು ಆಡಳಿತ ವಯೋವೃದ್ದೆಗೆ ಸಹಾಯಮಾಡಬೇಕಾಗಿ ಹುಚ್ಚಮ್ಮ ಅವಲತ್ತುಕೊಂಡಿದ್ದಾರೆ.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296