ತುಮಕೂರು: ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಇದರ ಸತ್ಯಾಸತ್ಯತೆ ಬಗ್ಗೆ ನಮಗೆ ಮಾಹಿತಿ ಇಲ್ಲ, ಇದ್ರಲ್ಲಿ ಡಿಫೆಂಡ್ ಮಾಡಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುನಿರತ್ನ ಪ್ರಕರಣ ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು. ಎಲ್ಲೋ ಒಂದು ಕಡೆ ರಾಜ್ಯ ಸರ್ಕಾರದ ತರಾತುರಿ ನೋಡಿದ್ರೆ. ಇದ್ರಲ್ಲಿ ರಾಜಕೀಯ ಷಡ್ಯಂತ್ರ ಇದೆ ಎಂಬುದನ್ನ ನಾವು ಗಮನಿಸಬೇಕಾಗುತ್ತೆ. ತನಿಖೆಯಾಗಲಿ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಹತಾಶರಾಗಿದ್ದಾರೆ. ಕಳೆದ ಎರಡು ತಿಂಗಳಿಂದ ನಿರಂತರವಾಗಿ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟವನ್ನ ಮಾಡಿದ್ದೇವೆ. ವಾಲ್ಮೀಕಿ ನಿಗಮ ಹಗರಣ ವಿರುದ್ಧ ಮಾಡಿದ್ದ ಹೋರಾಟ. ಮೂಡ ವಿರುದ್ಧ ಪಾದಯಾತ್ರೆ ಮಾಡಿದ ವಿರುದ್ಧ ನಮ್ಮ ಪಕ್ಷದ ಹೋರಾಟ ಫಲವಾಗಿ ರಾಜ್ಯದ ಮುಖ್ಯಮಂತ್ರಿಗಳು ಒಂಟಿ ಕಾಲಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.
ಹಾಗಾಗಿ ಈ ಒಂದು ಘಟನೆಗಳಿಂದ ಮುಖ್ಯಮಂತ್ರಿಗಳು ಹತಾಶರಾಗಿದ್ದಾರೆ. ಸ್ವಪಕ್ಷದಲ್ಲಿರುವ ಮುಖ್ಯಮಂತ್ರಿ ರೇಸ್ ಹೆಚ್ಷಾಗಿದೆ. ಹೀಗಾಗಿ ಹತಾಶರಾಗಿ ಮುಖ್ಯಮಂತ್ರಿಗಳು ವಿರೋಧ ಪಕ್ಷಗಳನ್ನ ಎದುರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಹಳೇ ಪ್ರಕರಣಗಳನ್ನ ಕೆದಕುವುದು, ಬಿಜೆಪಿ ನಾಯಕರನ್ನ ಟಾರ್ಗೆಟ್ ಮಾಡುವುದು ಅದೇನು ಹೊಸದೇನು ಅಲ್ಲ ಇದೆಲ್ಲ ರಾಜ್ಯದ ಜನ್ರಿಗೆ ಅನ್ನಿಸಿದೆ. ಮೂಡಾ ತೀರ್ಪು ಇನ್ನೂ ಬರಬೇಕಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


