ಓಸ್ಲೋ: ವೆನೆಜುವೆಲಾದ ಜನರ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಿ, ನ್ಯಾಯಯುತ ಹಾಗೂ ಶಾಂತಿಯುತ ಪರಿವರ್ತನೆ ತರಲು ಹೋರಾಡಿದ್ದಕ್ಕಾಗಿ ರಾಜಕಾರಣಿ, ಹಕ್ಕುಗಳ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ.
ಮಾರಾ ಕೊರಿನಾ ಮಚಾದೊ ಅವರು ವೆನೆಜುವೆಲಾದ ಖ್ಯಾತ ರಾಜಕಾರಣಿ, ಕೈಗಾರಿಕಾ ಎಂಜಿನಿಯರ್ ಮತ್ತು ಮಾನವ ಹಕ್ಕುಗಳ ವಕೀಲರು. 1967ರ ಅಕ್ಟೋಬರ್ 7ರಂದು ಕ್ಯಾರಕಾಸ್‌ನಲ್ಲಿ ಜನಿಸಿದರು.
ಮನಶ್ಶಾಸ್ತ್ರಜ್ಞೆ ಕೊರಿನಾ ಪ್ಯಾರಿಸ್ಕಾ ಮತ್ತು ಉದ್ಯಮಿ ಹೆನ್ರಿಕ್ ಮಚಾದೊ ಜುಲೋಗಾ ದಂಪತಿಯ ಹಿರಿಯ ಪುತ್ರಿಯಾಗಿದ್ದಾರೆ.
ಬೆಲ್ಲೊ ಕ್ಯಾಥೋಲಿಕ್ ವಿಶ್ವವಿದ್ಯಾನಿಲಯದಿಂದ ಕೈಗಾರಿಕಾ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಕ್ಯಾರಕಾಸ್ ನಲ್ಲಿರುವ ಇನ್ ಸ್ಟಿಟ್ಯೂಟೊ ಡಿ ಎಸ್ಟುಡಿಯೋಸ್ ಸುಪೀರಿಯರ್ಸ್ ಡಿ ಅಡ್ಮಿನಿಸ್ಟ್ರೇಷಿಯನ್ (ಐಇಎಸ್‌ಎ) ನಿಂದ ಫೈನಾನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC