ಸ್ನೇಹ ಅನ್ನೋದನ್ನ ವಿವರಿಸಲು ಪದಗಳು ಸಾಲದು. ಸ್ನೇಹಿತರಿಗಾಗಿ ಪ್ರಾಣಕೊಟ್ಟವರೂ ಇತಿಹಾಸದಲ್ಲಿದ್ದಾರೆ. ಇದೀಗ ಸಾಮಾಜಿಕ ಜಾಲತಾಣವೊಂದರಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಸ್ನೇಹಿತನ ಮೃತದೇಹದ ಎದುರು ಕೊನೆಯ ಬಾರಿಗೆ ಪ್ರಾಣ ಸ್ನೇಹಿತ ಆತ್ಮೀಯತೆಯಿಂದ ಕಾಲ ಕಳೆದಿದ್ದಾನೆ. ಕಳೆದು ಹೋದ ಜೀವನದ ಕೊನೆಯ ಕ್ಷಣವನ್ನು ನೆನಪು ಮಾಡಿಕೊಂಡಿದ್ದಾನೆ.
ಹೌದು..! ವೈರಲ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ಪ್ರಾಣ ಸ್ನೇಹಿತ ಮೃತಪಟ್ಟಾಗ ಆತನ ಮೃತದೇಹವನ್ನ ಅಂತ್ಯ ಕ್ರಿಯೆ ನಡೆಸುವ ಮುನ್ನ ಮೃತದೇಹಕ್ಕೆ ಮದ್ಯ ಕುಡಿಸಿ, ಸಿಗರೇಟ್ ಹೊತ್ತಿಸಿ ಸ್ನೇಹಿತ ತುಟಿಯ ಮೇಲೆ ಇಟ್ಟಿದ್ದಾನೆ. ಇದು ನನ್ನ ಜೊತೆಗಿನ ಕೊನೆಯ ಪಾರ್ಟಿ ಎಂದು ಸ್ನೇಹಿತ ಭಾವುಕನಾಗಿದ್ದಾನೆ.
ಈ ವಿಡಿಯೋಗೆ ಸಾಕಷ್ಟು ಜನರು ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ನಿಜವಾದ ಸ್ನೇಹ ಎಂದರೆ ಇನ್ನು ಕೆಲವರು ಇದು ಸ್ನೇಹವಲ್ಲ ಮೂರ್ಖತನ ಎಂದಿದ್ದಾರೆ.
ಪ್ರತಿ ದಿನವೂ ಜೊತೆಗೂಡುತ್ತಿದ್ದಾಗ ಒಂದು ಪೆಗ್ ಹಾಕಿ, ಸಿಗರೇಟ್ ಸೇದುತ್ತಿದ್ದ ಸ್ನೇಹಿತರ ಅಗಲಿಕೆ ಇದು. ಆತನ ಜೊತೆಗೆ ಕೊನೆಯ ಬಾರಿ ಮದ್ಯ ಸೇವಿಸುವ, ಸಿಗರೇಟು ಸೇದುವ ಬಯಕೆಯಿಂದ ಈ ರೀತಿಯಾಗಿ ಮಾಡಿದ್ದಾರೆ. ಇನ್ನೆಂದಿಗೂ ಆತನ ಜೊತೆಗೆ ಸೇರಲು ಸಾಧ್ಯವಿಲ್ಲ ಎನ್ನುವ ಭಾವುಕತೆಯಿಂದ ಹೀಗೆ ಮಾಡಿದ್ದಾರೆ ಎನ್ನುವ ಮಾತು ಕೆಲವರಿಂದ ಕೇಳಿ ಬಂತು.
ಈ ವಿಡಿಯೋವನ್ನ ಲಕ್ಷಾಂತರ ಜನ ನೆಟ್ಟಿಗರು ವೀಕ್ಷಿಸಿ ತಮ್ಮದೇ ಆಲೋಚನೆಗಳ ಮೂಲಕ ಕಾಮೆಂಟ್ ಹಾಕಿದ್ದಾರೆ. ಸತ್ತ ವ್ಯಕ್ತಿ ಮತ್ತು ಈತ ಒಂದು ಕಾಲದ ಆತ್ಮೀಯ ಸ್ನೇಹಿತರು ಇರಬಹುದು ಎಂದು ಸಾಕಷ್ಟು ಜನರು ಕಾಮೆಂಟ್ ಹಾಕಿದ್ದಾರೆ.
View this post on Instagram
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW