ತುಮಕೂರು: ನಗರದ ಭದ್ರಮ್ಮ ಸರ್ಕಲ್ ಬಳಿಯ ಎಚ್ ಡಿಎಫ್ ಸಿ ಬ್ಯಾಂಕ್ ಮುಂಭಾಗದಲ್ಲಿ ಕಳ್ಳನೋರ್ವ ನೋಡನೋಡುತ್ತಲೇ ವ್ಯಕ್ತಿಯೊಬ್ಬರ ಕೈಯಿಂದ ಹಣ ಕದ್ದು ಪರಾರಿಯಾದ ಘಟನೆ ನಡೆದಿದೆ.
ಕಾಂತರಾಜು ಎಂಬವರು ಎಚ್ ಡಿಎಫ್ ಸಿ ಬ್ಯಾಂಕ್ ನಿಂದ ಎರಡು ಲಕ್ಷ ಹಣ ಡ್ರಾ ಮಾಡಿ ಬ್ಯಾಗ್ ಗೆ ಹಾಕಿಕೊಂಡಿದ್ದರು. ಬ್ಯಾಂಕ್ ಒಳಗೆ ಇದನ್ನು ಗಮನಿಸಿದ ಓರ್ವ ಮತ್ತೋರ್ವನಿಗೆ ಸಂದೇಶ ರವಾನಿಸಿದ್ದು, ಕಾಂತರಾಜು ಬ್ಯಾಂಕ್ ನಿಂದ ಹೊರ ಬರುವ ವೇಳೆ ಕಳ್ಳ ಹಣದ ಬ್ಯಾಗ್ ಕಿತ್ತು ಪರಾರಿಯಾಗಿದ್ದಾನೆ.
ಕಳ್ಳರು ಪಲ್ಸರ್ ಹಾಗೂ ಯೂನಿಕಾನ್ ಬೈಕ್ ನಲ್ಲಿ ಬಂದಿದ್ದರು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಡಿಎಸ್ಪಿ ಶ್ರೀನಿವಾಸ್, ಎನ್ ಇ ಪಿಎಸ್ ಪೊಲೀಸರು ಭೇಟಿ ನೀಡಿದ್ದಾರೆ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy