ಮಗ ಮೃತಪಟ್ಟರೆ ಅವನ ಆಸ್ತಿಯಲ್ಲಿ ತಾಯಿಗೂ ಪಾಲಿದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಆದರೆ, ಅದು ಮಗನಿಗೆ ಸಿಕ್ಕಿದ ಪಿತ್ರಾರ್ಜಿತ ಆಸ್ತಿಯಾಗಿರಬೇಕು ಮತ್ತು ತಾಯಿ ಮೊದಲನೇ ವರ್ಗದ ವಾರೀಸುದಾರರಾಗಿಬೇಕು.
ಹಿಂದೂ ಉತ್ತರಾಧಿಕಾರಿ ಕಾಯಿದೆ ಅಡಿ ಮೃತ ಪುತ್ರನ ಆಸ್ತಿಗೆ ತಾಯಿಯೂ ಪಾಲುದಾರರಾಗಲಿದ್ದಾರೆ. ಒಂದು ವೇಳೆ ಗಂಡ ಜೀವಂತವಾಗಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರನಿಗೆ ಸೇರಬೇಕಿರುವ ಆಸ್ತಿಯಲ್ಲಿ ತಾಯಿ ತನ್ನ ಪಾಲು ಪಡೆಯಬಹುದು ಎಂದು ತಿಳಿಸಿದೆ.


