ತುಮಕೂರು: ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗೀಯ ಕಚೇರಿಯಿಂದ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 28 ಹಾಗೂ 29ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸೆಪ್ಟೆಂಬರ್ 28ರಂದು ತುಮಕೂರು ಹಾಗೂ ಕೋರಾ ಉಪಸ್ಥಾವರ ಮತ್ತು ಸೆಪ್ಟೆಂಬರ್ 29ರಂದು ಹೆಬ್ಬೂರು ಹಾಗೂ ತಿಮ್ಮಸಂದ್ರ ಉಪಸ್ಥಾವರಗಳಿಂದ ಹೊರಹೊಮ್ಮುವ ಎಲ್ಲಾ 11ಕೆವಿ ಪೂರಕಗಳಿಗೆ ಒಳಪಡುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q