ಸರಗೂರು: ತಾಲ್ಲೂಕಿನ ನುಗು ಜಲಾಶಯ ಭರ್ತಿಯಾದ ಹಿನ್ನೆಲೆ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ನಂಜನಗೂಡು ಶಾಸಕ ಹರ್ಷವರ್ಧನ್ ಜೊತೆಯಾಗಿ ಬಾಗೀನ ಅರ್ಪಿಸಿದರು.
ತಾಲ್ಲೂಕಿನ ನುಗು ಜಲಾಶಯಕ್ಕೆ ಶುಕ್ರವಾರ ಇಬ್ಬರು ಶಾಸಕರು ಭೇಟಿ ನೀಡಿದ ಶಾಸಕರು ಗಣಪತಿ, ಲಕ್ಷ್ಮಿ ದೇವಿಯ ವಿಗ್ರಹವಿಟ್ಟು ಪೂರ್ಣಕುಂಭ ಕಳಶದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಜಲಾಶಯಕ್ಕೆ ಬಾಗೀನ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂದಿನಿಂದಲೇ ನುಗು ಮೇಲ್ದಂಡೆ ನಾಲೆಗೆ ನೀರು ಹರಿಸಲಾಗುವುದು. ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳಲ್ಲಿನ ಹೂಳು, ಜಂಗಲ್ ಕಟ್ಟಿಂಗ್ ಮಾಡಿಸಿ ನಂತರ ಆಗಸ್ಟ್ 5ರಿಂದ ನೀರು ಹರಿಸಲಾಗುವುದು ಎಂದರು.
ನುಗು ಅತಿಥಿ ಗೃಹ, ಜಲಾಶಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಬಿರ್ವಾಳ್‍ನಿಂದ ಮುಳ್ಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಹಲಸೂರಿನಿಂದ ಮುಳ್ಳೂರು ಸೇತುವೆವರೆಗೂ ರಸ್ತೆ ಹದಗೆಟ್ಟಿದ್ದು, ಅದನ್ನು ಶೀಘ್ರದಲ್ಲೇ ಸರಿಪಡಿಸಲು ಕ್ರಮವಹಿಸಲಾಗುವುದು. ಜೊತೆಗೆ ನುಗು ಜಲಾಶಯದ ನಿರ್ವಹಣೆಗಾಗಿ ಶಾಶ್ವತವಾಗಿ ನುಗು ಅತಿಥಿ ಗೃಹದಲ್ಲಿ ಎಂಜಿನಿಯರ್ ಉಪ ವಿಭಾಗದ ಕಚೇರಿಯನ್ನು ತೆರೆಯಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಹಲಸೂರು ಅಣೆಕಟ್ಟು ವ್ಯಾಪ್ತಿಯಲ್ಲಿ 5110, ಮೇಲ್ದಂಡೆ ನಾಲೆ ವ್ಯಾಪ್ತಿಯಲ್ಲಿ 13 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶವಿದ್ದು, ಇದರಿಂದ ತುಂಬಾ ರೈತರಿಗೆ ಅನುಕೂಲವಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಜಲಾಶಯ ಮತ್ತು ನಾಲೆಗಳ ನಿರ್ವಹಣೆಗೆ ಒತ್ತು ನೀಡಬೇಕು. ನಾಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಂತೆ ಅಧಿವೇಶನದಲ್ಲಿ ಎಂದು ತಿಳಿಸಿದರು.
ಬಳಿಕ ಮಾತನಾಡಿದ ನಂಜನಗೂಡು ಶಾಸಕ ಹರ್ಷವರ್ಧನ್, ಉತ್ತಮ ಮಳೆಯಾಗಿ ನುಗು ಜಲಾಶಯ ಭರ್ತಿಯಾಗಿರುವುದು ಸಂತಸದ ವಿಚಾರ. ಶೀಘ್ರದಲ್ಲೇ ನುಗು ಏತ ನೀರಾವರಿಗೆ ಚಾಲನೆ ನೀಡಲಾಗುವುದು. ಇನ್ನು 11 ತಿಂಗಳೊಳಗೆ ಕುಡಿಯುವ ನೀರಿನ ಸಮಸ್ಯೆ ಇನ್ನಿತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಇದಲ್ಲದೆ ನುಗು ಜಲಾಶಯದಂತಹ ಉತ್ತಮ ಪರಿಸರವಿರುವ ಜಾಗವನ್ನು ಸದ್ಬಳಕೆ ಮಾಡಿಕೊಂಡು ಜನರಿಗೆ ಅನುಕೂಲವಂತೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ರೈತರು ತಮ್ಮ ಅಳಲನ್ನು ಶಾಸಕರುಗಳ ಮುಂದೆ ಪ್ರಸ್ತಾಪಿಸಿದರು. ನಂತರ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಕೃಷಿ ಇಲಾಖೆ ಅಧಿಕಾರಿ ರಂಗಸ್ವಾಮಿ ಅವರಿಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸುವಂತೆ ಸಲಹೆ ನೀಡಿದರು.
ಸ್ಥಳದಲ್ಲಿ ರೈತ ಮುಖಂಡರಾದ ಶಂಭುಲಿಂಗನಾಯಕ, ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲಶಿವರಾಜು.ಚಾಮಲಾಪುರ ಗಿರೀಶ್, ಬಿರ್ವಾಳ್ ಬಸವರಾಜು, ಚಿಕ್ಕಣ್ಣ, ಗೋವಿಂದಚಾರ್, ಪುರದಕಟ್ಟೆ ಬಸವರಾಜು, ಸಿದ್ದರಾಜು, ಮಹೇಶ್, ವಾಣಿ, ಮಂಜು, ಗ್ರಾಪಂ ಸದಸ್ಯ ಹಾದನೂರುಪ್ರಕಾಶ್. ರವಿಕುಮಾರ್, ಡಿ.ಪಿ.ನಟರಾಜು, ಕುಂಬ್ರಳ್ಳಿ ಸುಬ್ಬಣ್ಣ, ಕಳಸೂರು ಬಸವರಾಜು.ಬಿ.ಎಸ್.ಮಹದೇವಪ್ಪ, ಶಿವರುದ್ರ, ನುಗು ಜಲಾಶಯದ ಇಇ ಎಂ.ಬಿ.ಪಾಟೀಲ್, ಎಇಇ ಎ.ಸಿ.ಕೃಷ್ಣ, ಎಇ ದೀಪಕ್, ಶ್ರೀಪತಿ, ಅಶೋಕ್ ಮುಂತಾದವರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz