ತುರುವೇಕೆರೆ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೂತನ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ನಾಗೇಂದ್ರ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದೇವೆ ಎಂದ ಅವರು, ಪ್ರಧಾನ ಕಾರ್ಯದರ್ಶಿಯಾಗಿ ವಿಜಯಕುಮಾರ್ ಗೌರವಾಧ್ಯಕ್ಷರಾಗಿ ಬಸವರಾಜು ಅಬಕನಹಳ್ಳಿ ಉಪಾಧ್ಯಕ್ಷರಾಗಿ ಗಂಗಾಧರಯ್ಯ ಕಾರ್ಯದರ್ಶಿಯಾಗಿ ಗೋವಿಂದರಾಜು ಸಹಕಾರ್ಯದರ್ಶಿಯಾಗಿ ಆನಂದ್ ಕಾನೂನು ಸಲಹೆಗಾರರಾಗಿ ವಕೀಲ ಮಂಜುನಾಥ್ ಪತ್ರಿಕಾ ಪ್ರತಿನಿಧಿಯಾಗಿ ಸತ್ಯನಾರಾಯಣ್ ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷರಾಗಿ ಕಲಂದರ್ ಹಾಗೂ ಸಂಘಟನಾ ಸಂಚಾಲಕರಾಗಿ ಶಂಕರಲಿಂಗಪ್ಪ ಲಕ್ಕಸಂದ್ರ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು.
ನಂತರ ಮಾತನಾಡಿದ ಅವರು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸರ್ಕಾರಕ್ಕೆ ಕೊಬ್ಬರಿ ಬೆಂಬಲ ಬೆಲೆ ವಿಚಾರದಲ್ಲಿ ಮನವಿ ಸಲ್ಲಿಸಲಾಗಿದೆ ರಾಜ್ಯ ಸರ್ಕಾರವು ನಿಗದಿ ಮಾಡಿರುವಂತ ಪ್ರೋತ್ಸಾಹ ಧನ 1,250ರೂಗಳು ಹೊಸ ಖರೀದಿಗೆ ಮಾತ್ರ ಅನ್ವಯಿಸುತ್ತದೆ ಎಂದು ತೀರ್ಮಾನ ಮಾಡಿರುವುದು ರೈತರಿಗೆ ಮಾಡಿರುವ ದೊಡ್ಡ ಮೋಸ ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಈ ಹಿಂದೆ ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಕೃಷಿ ಸಮ್ಮಾನ್ ಯೋಜನೆಯಲ್ಲಿ ಹಣವನ್ನು ನಿಲ್ಲಿಸಲಾಗಿದೆ. ರಾಜ್ಯ ಸರ್ಕಾರವು ರೈತರ ಬಗ್ಗೆ ಆಲೋಚನೆ ಮಾಡಿ ಕ್ವಿಂಟಾಲ್ ಕೊಬ್ಬರಿಗೆ 5,000 ಪ್ರೋತ್ಸಾಹಧನ ನೀಡಬೇಕು. ಅಲ್ಲದೆ ಈ ಹಿಂದೆ ನಫೆಡ್ ನಲ್ಲಿ ಖರೀದಿ ಮಾಡಿರುವಂತ ರೈತರಿಗೂ ಸಹ 1,250ರೂ ಗಳ ಪ್ರೋತ್ಸಾಹ ಧನವನ್ನು ವಿಸ್ತರಿಸಬೇಕು ಹಾಗೆ ಪ್ರತಿ ರೈತರಿಂದ 20 ಕ್ವಿಂಟಾಲ್ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದ್ದು ರೈತರು ತಮ್ಮ ಕೊಬ್ಬರಿಗಳನ್ನು ಮೂರು ಕಂತುಗಳ ಮೂಲಕ ಮಾರಲು ಅವಕಾಶವನ್ನು ರೈತರಿಗೆ ಮಾಡಿಕೊಡಬೇಕು ಹಾಗೂ ಖರೀದಿ ಕೇಂದ್ರಗಳನ್ನು ಹೆಚ್ಚಿಸಿ ಮತ್ತು ಮೂರು ತಿಂಗಳವರೆಗೂ ವಿಸ್ತರಿಸಿ ನೋಂದಣೆಗಾಗಿ ರೈತರು ಕಾಯುತ್ತಿದ್ದು ನೊಂದಣಿಯನ್ನು ಸಹ ಆರಂಭಿಸಬೇಕು ಇನ್ನೂ 60% ರೈತರು ನೋಂದಣಿಯನ್ನು ಸಹ ಮಾಡಿಸಿಲ್ಲ ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿದ್ದು ನೋಂದಣಿ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಮಂತ್ರಿಗಳು ಇತ್ತ ಗಮನ ಹರಿಸದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಎಪಿಎಂಸಿ ಮುಂದಿನ ಗೇಟಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಬಸವರಾಜ್. ಉಪಾಧ್ಯಕ್ಷ ಗಂಗಾಧರ್. ವಿಜಯಕುಮಾರ್ ಗೋವಿಂದ್ ರಾಜ್ ಆನಂದ್ ಮತ್ತಿತರರು ಸೇರಿದಂತೆ ನೂತನ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA