ಗುಬ್ಬಿ: ಹೇಮಾವತಿ ನೀರು ಮಾಗಡಿಗೆ ಹರಿಸುವ ಲಿಂಕ್ ಕೆನಾಲ್ ಪೈಪ್ ಲೈನ್ ಕಾಮಗಾರಿಗೆ ಸಾವಿರಾರು ರೈತರು ಹೋರಾಟ ನಡೆಸಿ ಕೆಲಸ ನಿಲ್ಲಿಸಲು ಸೂಚಿಸಿದ್ದರೂ, ಮೂರು ದಿನದ ಬಳಿಕ ಬೃಹತ್ ಗಾತ್ರದ ೧೨ ಅಡಿ ವ್ಯಾಸದ ಪೈಪ್ ಗಳನ್ನು ಲಾರಿಗಳ ಮೂಲಕ ತಂದು ಕೆಲಸ ಪುನರಾರಂಭ ಮಾಡುವ ಮುನ್ಸೂಚನೆ ಕಂಡ ರೈತರು, ತಕ್ಷಣ ಶಾಸಕ ಎಂ.ಟಿ. ಕೃಷ್ಣಪ್ಪ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹೊಸಹಳ್ಳಿ ಕ್ರಾಸ್ ಬಳಿ ದೊಡ್ಡ ಪೈಪ್ ಹೊತ್ತ ೨೫ ಲಾರಿಗಳು ಪ್ರತ್ಯಕ್ಷವಾಗಿರುವುದು ಕಂಡ ಸ್ಥಳೀಯ ರೈತರು, ಶಾಸಕರಿಗೆ ಮಾಹಿತಿ ತಿಳಿಸಿದರು. ಕೂಡಲೇ ನೂರಾರು ಮಂದಿ ಜಮಾಯಿಸಿ ಹೆಬ್ಬರು ರಸ್ತೆಯಲ್ಲಿ ಕುಳಿತು ಕೆಲ ಕಾಲ ಪ್ರತಿಭಟನೆ ನಡೆಸಿ, ಲಾರಿಗಳನ್ನು ತಡೆದು ಮರಳಿ ವಾಪಸ್ ಹೋಗಲು ತಾಕೀತು ಮಾಡಿದರು.
ಪ್ರತಿಭಟನಾ ನಿರತರನ್ನು ಕುರಿತು ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, “ಯಾವುದೇ ರೀತಿ ರೈತರಿಗೆ ನೋಟಿಸ್ ನೀಡದೆ ಭೂ ವಶಕ್ಕೆ ಪ್ರಕ್ರಿಯೆ ನಡೆಸದೆ ಏಕಾಏಕಿ ಕಾಮಗಾರಿ ಮಾಡಿರುವುದೇ ಇಂಜಿನಿಯರ್ ಗಳ ಕಮಿಷನ್ ಆಟವಾಗಿದೆ. ಕಂದಾಯ ಇಲಾಖೆಯಿಂದ ಅನುಮತಿ ಸಿಗದೇ ಕೆಲಸ ಆರಂಭಿಸಿರುವ ಅಧಿಕಾರಿಗಳು ಸರ್ಕಾರದ ಕೈ ಗೊಂಬೆಯಾಗಿದ್ದಾರೆ. ಈ ಕೆಲಸ ನಿಲ್ಲಿಸಲು ಗೃಹ ಸಚಿವರು ಹೇಳಿದ್ದರೂ ಕಿಂಚಿತ್ತೂ ಬೆಲೆ ಸಿಗದ ಈ ಸಮಯದಲ್ಲಿ ಪ್ರತಿಭಟನೆ ಅನಿವಾರ್ಯ.
ಸಿ.ಎಸ್.ಪುರ ಹೋಬಳಿಯಿಂದ ರಾಜಕೀಯ ಶಕ್ತಿ ಪಡೆದ ಶಾಸಕ ಶ್ರೀನಿವಾಸ್ ಅವರು ಹೋಬಳಿಗೆ ನೀರಿನ ವಿಚಾರದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ ಕೆಲಸ ನಿಲ್ಲಿಸಬೇಕಿತ್ತು. ನಮ್ಮ ಹೋರಾಟಕ್ಕೆ ಕೈ ಜೋಡಿಸದೆ ಪ್ರತ್ಯೇಕ ಹೋರಾಟ ಮಾಡುತ್ತಾರಂತೆ. ಹಾಗಾದರೆ ನಾವು ನಿಮ್ಮ ಹೋರಾಟಕ್ಕೆ ಬರುತ್ತೇವೆ. ನೀರು ಉಳಿಸಿಕೊಳ್ಳುವುದು ನಮಗೆ ಮುಖ್ಯ ಎಂದ ಅವರು, ತಾಕತ್ತು ನನಗಿದೆ. ಗುಬ್ಬಿಗೆ ಬರುತ್ತೇನೆ. ಯಾರಿಗೂ ಹೆದರಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296