ಪಾವಗಡ: ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಪಾವಗಡ ತಾಲೂಕಿನಲ್ಲಿ ದಲಿತ ಸಂಘಟನೆಗಳು ಒಕ್ಕೂಟ, ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.
ತಾಲೂಕಿನನಿರೀಕ್ಷಣ ಮಂದಿರದಿಂದ ಜಾಥಾ ಆರಂಭಿಸಿದ ಪ್ರತಿಭಟನಾಕಾರರು ಶನೇಶ್ವರ ಸ್ವಾಮಿ ವೃತ್ತದ ಬಳಿ ತೆರಳಿ ಮಾನವ ಸರಪಳಿ ರಚಿಸಿದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಕಚೇರಿ ಆವರಣಕ್ಕೆ ತೆರಳಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೊಟ್ರ ಶಂಕರ್, ಈ ದೇಶದಲ್ಲಿ ನಮ್ಮ ಪರವಾಗಿ ಯಾವುದೇ ಸ್ವಾಮೀಜಿ ಅಥವಾ ರಾಜಕಾರಣಿಯೂ ಇಲ್ಲ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ ನಮ್ಮ ಜೊತೆಗಿದೆ. ಸರ್ಕಾರ ಮೀಸಲಾತಿ ವಿಚಾರದಲ್ಲಿ ನಮ್ಮ ಸಮುದಾಯಕ್ಕೆ ಸಿಹಿ ಸುದ್ದಿ ಕೊಡದಿದ್ದರೆ. ಸರ್ಕಾರದ ಹಣೆಬರಹವನ್ನು ನಾವು ಕಿತ್ತು ಹಾಕುತ್ತೇವೆ ಎಂದು ಅವರು ಹೇಳಿದರು.
ಹನುಮಂತರಾಯಪ್ಪ ಕಡಪಲಕೆರೆ ಹೆಚ್.ಆರ್.ಎಫ್. ಡಿ.ಎಲ್. ಮಾತನಾಡಿ, ಎ ಬಿ ಸಿ ಡಿ ವರ್ಗೀಕರಣ ಇವತ್ತು ನಿನ್ನೆಯದ್ದಲ್ಲ . ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ತಕ್ಷಣವೇ ಸದಾಶಿವ ಆಯೋಗ ಜಾರಿಯಾಗಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶೇಷಾನಂದನ್ ಹಾಗೂ ಸಮುದಾಯದ ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಹನುಮಂತರಾಯಪ್ಪ ಸಿ.ಕೆ.ಪುರ ಹಾಗೂ ಸಂಗಡಿಗರ ಕಲಾತಂಡದ ಹಾಡುಗಳು ಗಮನ ಸೆಳೆದವು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy