ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ಭೇಟಿ ಮಾಡಿ ಸರ್ಕಾರಿ ಸಾಗುವಳಿ ಜಮೀನನ್ನು ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಆದೇಶಿಸಿರುವುದಕ್ಕಾಗಿ ಅಭಿನಂದನೆ ಸಲ್ಲಿಸಲಾಯಿತು.
ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಸರ್ಕಾರಿ ಸಾಗುವಳಿ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಮಾರ್ಗಸೂಚಿ ನೀಡಬೇಕೆಂದು ಮನವಿ ಮಾಡಲಾಯಿತು.
ನಂತರ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಹಿಂದೆ ಭೂಮಿ ಸಾಗುವಳಿ ಮಾಡುತ್ತಿದ್ದು ಸಾಗುವಳಿ ಚೀಟಿ ಮತ್ತು ಪಹಣಿ ಕೂಡ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯ ಬಹಳಷ್ಟು ಪ್ರದೇಶಗಳನ್ನು ಪರಿಭಾವಿತರಣ್ಯ ಎಂದು ವರ್ಗಾವಣೆ ಮಾಡಿ ಕೆಲವೊಂದು ಮಂಜೂರು ಜಮೀನುಗಳನ್ನು ಅರಣ್ಯ ಎಂದು ಪರಿಗಣಿಸಿರುತ್ತಾರೆ. ಇತ್ತೀಚಿಗೆ ಅರಣ್ಯ ಸಚಿವರು ಅರಣ್ಯ ಜಮೀನನ್ನು ಕುಲ್ಲಾ ಮಾಡಬೇಕೆಂದು ಆದೇಶಿಸಿದ್ದು ಮಂಜೂರಾದ ಜಮೀನುಗಳನ್ನು ಹೆಚ್ಚಾಗಿ ಮಧ್ಯಮ ಮತ್ತು ಸಣ್ಣ ವರ್ಗದ ರೈತ ಬೆಳೆಗಾರರು ಹೊಂದಿದ್ದು ಒತ್ತುವರಿ ತೆರವಿನಿಂದ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ರೈತ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದಾಗ , ಅಲ್ಲೇ ಇದ್ದ ನ್ಅರಣ್ಯ ಸಚಿವರಿಗೆ ಈ ವಿಚಾರವನ್ನು ಪ್ರಸ್ತಾಪಿಸಿ ,ಮುಂದಿನ ಕಾಫಿ ಪಸಲು ಕುಯ್ಯುವವರೆಗೂ ಅವಕಾಶ ಮಾಡಿಕೊಡುವಂತೆ ತಿಳಿಸಿದರು.
ಮುಖ್ಯಮಂತ್ರಿಗಳು ಮಾತನಾಡಿ, ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಬೆಳೆಗಾರರ ಸಂಘಟನೆಗಳು ಸಹ ತೊಂದರೆಯಾಗದಂತೆ ಸಹಕರಿಸಬೇಕೆಂದು ತಿಳಿಸಿದರು.
ಬಹಳಷ್ಟು ಪರಿಭಾವಿತರಣ್ಯ ಪ್ರದೇಶಗಳಲ್ಲಿ ಸೆಕ್ಷನ್ ೪ ಅಡಿಯಲ್ಲಿ ಇರುವ ಸಾಗುವಳಿ ಜಮೀನುಗಳನ್ನು ಕಂದಾಯ ಇಲಾಖೆಗೆ ಮರು ಪರಿಗಣಿಸಿ ಅರಣ್ಯದಿಂದ ಹೊರಗೆ ಇಡಬೇಕೆಂದು ಒಕ್ಕೂಟದ ವತಿಯಿಂದ ಕೇಳಿಕೊಳ್ಳಲಾಯಿತು.
ಸಕಲೇಶಪುರ ಆಲೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಚ್.ಎಂ.ವಿಶ್ವನಾಥ್ ರವರು ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಇವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮತ್ತು ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರನ್ನು ಭೇಟಿಮಾಡಿದ್ದು, ಮಾಜಿ ಮಂತ್ರಿಗಳಾದ ಕಿಮನ್ನೇ ರತ್ನಾಕರ್ ಹಾಗೂ ಜಯಪ್ರಕಾಶ್ ಹೆಗ್ಡೆ ಅವರು ಸಹ ಜೊತೆಗಿದ್ದು ಸಹಕರಿಸಿರು.
ಒಕ್ಕೂಟದ ವತಿಯಿಂದ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಹೆಚ್.ಟಿ.ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ ಹಾಗೂ ಮಾಜಿ ಅಧ್ಯಕ್ಷರಾದ ಬಿ.ಎಸ್.ಜಯರಾಮ್ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q