ಮಹಾರಾಷ್ಟ್ರ: ಗಗನ್ ಯಾನ್ ಯೋಜನೆಯತ್ತ ಇಡೀ ದೇಶದ ಚಿತ್ತವೇ ನೆಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಾರಾಷ್ಟ್ರದ ಪರ್ಭಾನಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ, ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವುದು ಈ ಬಾರಿಯ ಚುನಾವಣೆಯ ಅಜೆಂಡಾ ಎಂದರು.
ನಮ್ಮ ಸರ್ಕಾರ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಕೊರೋನಾ ಸಮಯದಲ್ಲಿ ಶಕ್ತಿ ಮೀರಿ ದೇಶದ ಹಿತಕ್ಕಾಗಿ ದುಡಿದಿದ್ದೇವೆ. ಆ ಮುಖಾಂತರ ಇದೇ ವಿಶ್ವವೇ ನಮ್ಮನ್ನು ಒಂದು ಸ್ವಾವಲಂಬಿ ದೇಶವೆಂದು ನೋಡಲಾರಂಭಿಸಿದೆ. ಇದಷ್ಟೇ ಅಲ್ಲದೆ ನಾವು ಚಂದ್ರಯಾನವನ್ನು ಯಶಸ್ವಿಗೊಳಿಸಿ ಇದೀಗ ಗಗನಯಾನದ ಯಶಸ್ಸಿನತ್ತ ಶ್ರಮಿಸುತ್ತಿದ್ದೇವೆ.
ಕೇವಲ ಹತ್ತು ವರ್ಷಗಳಲ್ಲಿ ದೇಶ ಅಭಿವೃದ್ಧಿಯಲ್ಲಿ ಪಥದಲ್ಲಿ ದಾಪುಗಾಲಿಟ್ಟು ಮುನ್ನುಗ್ಗುತ್ತಿದೆ ಎಂದ ಮೋದಿ, ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಮಾಧ್ಯಮಗಳಲ್ಲಿ ಪ್ರತಿದಿನ ಉಗ್ರರ ದಾಳಿ, ಬಾಂಬ್ ಸ್ಫೋಟದ ಸುದ್ದಿ ಬರುತ್ತಿತ್ತು.
ಆದರೆ, 2019ರಿಂದ ಗಡಿಯಾಚೆಯಿಂದ ಭಯೋತ್ಪಾದಕರ ಒಳನುಸುಳುವಿಕೆ ಕೂಡ ಸ್ಥಗಿತಗೊಂಡಿದೆ. ಸರ್ಜುಕಲ್ ಸ್ಟ್ರೈಕ್ ಮುಖಾಂತರ ಅವೆಲ್ಲದಕ್ಕೂ ಉತ್ತರ ಕೊಟ್ಟಿದ್ದೇವೆ ಎಂದು ತಮ್ಮ ಜರ್ನಿಯ ಬಗ್ಗೆ ಮಾತನಾಡಿದ್ರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


