ತುಮಕೂರುನಿಂದ ಗೌರಿಬಿದನೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ವೊಂದದರಲ್ಲಿ ಬಸ್ಸಿನ ಟಾಪ್ ನಲ್ಲಿ ಕೂಡ ಜನರು ಪ್ರಯಾಣಿಸುತ್ತಿರುವುದನ್ನು ಕಂಡು ಕೊರಟಗೆರೆ ಸಬ್ ಇನ್ ಸ್ಪೆಕ್ಟರ್ ಚೇತನ್ ಕುಮಾರ್ ಬಸ್ಸನ್ನು ನಿಲ್ಲಿಸಿ, ಬಸ್ ನ ಮೇಲೆ ಇದ್ದ ಪ್ರಯಾಣಿಕರನ್ನು ಇಳಿಸಿದ ಘಟನೆ ನಡೆದಿದೆ.
ಬಸ್ಸಿನ ಒಳಗೆ ಹಾಗೂ ಟಾಪ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಅಪಾಯಕಾರಿಯಾಗಿ ಪ್ರಯಾಣಿಸುತ್ತಿದ್ದರು. ಬಸ್ಸನ್ನು ಹಿಂಬಾಲಿಸಿಕೊಂಡು ಬಂದ ಚೇತನ್ ಕುಮಾರ್ ಅವರು ಬಸ್ ನ್ನು ನಿಲ್ಲಿಸಿದರಲ್ಲದೇ ಚಾಲಕ ಹಾಗೂ ಮಾಲಿಕನ ಮೇಲೆ ಕೇಸ್ ದಾಖಲಿಸಿದ್ದಾರೆ.
ಬಸ್ಸಿನ ಮೇಲೆಯೂ ಜನರನ್ನು ಕೂರಿಸಿಕೊಂಡಿದ್ದರೂ, ಓವರ್ ಸ್ಫೀಡ್ ಆಗಿ ಬಸ್ ಸಂಚರಿಸುತ್ತಿತ್ತು. ಬಸ್ಸಿನ ಮೇಲೆ ಇದ್ದವರನ್ನು ಇಳಿಸಿದ ಬಳಿಕ ಬೇರೆ ಬಸ್ಸಿನಲ್ಲಿ ಹೋಗುವಂತೆ ಅವರಿಗೆ ಸೂಚಿಸಲಾಗಿದೆ. ಇನ್ನೊಂದೆಡೆ ಹಬ್ಬಗಳಿಗೆ ಜನರು ಊರಿಗೆ ಹೋಗುತ್ತಿದ್ದ ಕಾರಣ, ಜನರನ್ನು ಸುರಕ್ಷಿತವಾಗಿ ತಲುಪಿಸಿದ ಬಳಿಕ ಬಸ್ ನ್ನು ಸ್ಟೇಷನ್ ಗಳಿ ಹಾಕುವಂತೆ ಚಾಲಕನಿಗೆ ಸಬ್ ಇನ್ ಸ್ಪೆಕ್ಟರ್ ಚೇತನ್ ಕುಮಾರ್ ಸೂಚನೆ ನೀಡಿದರು.
ಖಾಸಗಿ ಬಸ್ ಚಾಲಕರು ಹಾಗೂ ಮಾಲಿಕರಿಗೆ ಸಭೆ ಕರೆದು ಓವರ್ ಸ್ಫೀಡ್ ಹಾಗೂ ಓವರ್ ಲೋಡ್ ಹಾಕಬಾರದು ಎಂದು ಜಾಗೃತಿ ಮೂಡಿಸಿದ್ದರು, ಇಂತಹ ಘಟನೆ ಮರುಕಳಿಸುತ್ತಲೇ ಇದೆ. ಪೊಲೀಸರು ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಜೊತೆಗೆ ಕೊರಟಗೆರೆ ಸಬ್ ಇನ್ ಸ್ಪೆಕ್ಟರ್ ಚೇತನ್ ಕುಮಾರ್ ಅವರ ಸಮಯ ಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ


