ತಿಪಟೂರು: ಸಾರ್ವಜನಿಕ ಆಸ್ಪತ್ರೆ ತಿಪಟೂರು ANZ ಪ್ರವೇಟ್ ಲಿಮಿಟೆಡ್ ಮತ್ತು UNITED WAY OF BANGALORU ಸ್ವಯಂ ಸೇವಾಸಂಸ್ಥೆಗಳ ನೆರವಿನೊಂದಿಗೆ ಅನುಷ್ಟಾನ ಗೊಂಡಿರುವ ಆಕ್ಸಿಜನ್ ಜನರೇಟರ್ 500 LPM ಹಾಗೂ ಎರಡು ಡಯಾಲಿಸಿಸ್ ಮಿಷನ್ ಗಳನ್ನು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಮತ್ತು ಸಕಾಲ ಸಚಿವಾರಾದ ಬಿ.ಸಿ.ನಾಗೇಶ್ ಉದ್ಘಾಟನೆ ಮಾಡಿದರು.
ಇದೇ ವೇಳೆ ಸಾರ್ವಜನಿಕ ಆಸ್ಪತ್ರೆ ತಿಪಟೂರು ಇವರ ವತಿಯಿಂದ ANZ ಪ್ರವೇಟ್ ಲಿಮಿಟೆಡ್ ಮತ್ತು UNITED WAY OF BENGALURU ಇವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ರವಿಕುಮಾರ್ ಸ್ವಾಗತಿಸಿದರು ಮತ್ತು ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿಗಳಾದ ಡಾ.ಪ್ರಹ್ಲಾದ್ ಅಭಿನಂದನಾ ಮಾತುಗಳನ್ನಾಡಿದರು.
ತಾಲ್ಲೂಕಿನ ಕೋವಿಡ್ 19 ರೋಗಿಗಳಿಗೆ ಪ್ರಾಣವಾಯು ಪೂರೈಕೆಗೆ ನೆರವಾಗಿರುವ ಹಾಗೂ ಬಡ ರೋಗಿಗಳಿಗೆ ಡಯಾಲಿಸಿಸ್ ಸೇವಾ ಸೌಲಭ್ಯವನ್ನು ನೀಡಲು ನೆರವಾಗಿರುವಂತಹ ANZ ಪ್ರವೇಟ್ ಲಿಮಿಟೆಡ್ ಹಾಗೂ UNITED WAY OF BANGALORU ಸ್ವಾಯತ್ತ ಸಂಸ್ಥೆಗಳಿಗೆ ನಾವು ಅಭಾರಿಯಾಗಿದ್ದೇವೆ. ಸ್ವಯಂ ಸೇವಾ ಸಂಸ್ಥೆಯ ಅಧಿಕಾರಿಗಳು ತಿಪಟೂರು ತಾಲ್ಲೂಕಿನ ಬಡರೋಗಿಗಳಿಗೆ ನೆರವಾಗುತ್ತಿರುವ ಬಗ್ಗೆ ತಮಗೆ ಅತೀವ ಸಂತಸವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ರವಿ, ಡಾ.ಶಿವಕುಮಾರ್, ಡಾ.ವಿಜಯ್ ಕುಮಾರ್, ಡಾ.ಸುರೇಶ್, ಡಾ.ವಿನುತ ಹಾಗೂ ಆಸ್ಪತ್ರೆಯ ನೌಕರರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy