ಲೆಬನಾನ್ ದೇಶದಲ್ಲಿ ಸಾರ್ವಜನಿಕ ಸ್ಥಳಗಳು, ಮಾಲ್ ಗಳಲ್ಲಿ ಪೇಜರ್, ಸೋಲಾರ್ ಪೆನಲ್‌ಗಳ ಸ್ಪೋಟದಿಂದ ಭಾರೀ ಸಾವು ನೋವುಗಳು ಸಂಭವಿಸಿವೆ.
ವಿಶೇಷವಾಗಿ ಪೇಜರ್ ಗಳ ಬಳಕೆ ಇರುವ ಲೆಬನಾನ್‌ನಲ್ಲಿ ಸ್ಪೋಟಕ್ಕೆ ಬಳಸಿಕೊಳ್ಳಲಾಯಿತೇ ಎನ್ನುವ ಅನುಮಾನವಿದ್ದು, ತನಿಖೆಗೆ ಆದೇಶಿಸಲಾಗಿದೆ.
ವಿಶೇಷವಾಗಿ ಪೇಜರ್ ಗಳ ಬಳಕೆ ಇರುವ ಲೆಬನಾನ್ ನಲ್ಲಿ ಸ್ಪೋಟಕ್ಕೆ ಬಳಸಿಕೊಳ್ಳಲಾಯಿತೇ ಎನ್ನುವ ಅನುಮಾನವಿದ್ದು, ತನಿಖೆಗೆ ಆದೇಶಿಸಲಾಗಿದೆ.
ಲೆಬನಾನ್ ನ ಬೈರೂತ್ ಸೇರಿದಂತೆ ಹಲವು ಕಡೆಗಳಲ್ಲಿ ಪೇಜರ್, ವಾಕಿ ಟಾಕಿ, ಸೋಲಾರ್ ಉಪಕರಣಗಳ ಸ್ಫೋಟ ಸಂಭವಿಸಿದೆ. ಇದರಿಂದಾಗಿ 32 ಮಂದಿ ಮೃತಪಟ್ಟಿದ್ದು, 3,250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವಾಹನಗಳು ಬೆಂಕಿಗೆ ಆಹುತಿಯಾಗಿವೆ
ಏಕ ಕಾಲಕ್ಕೆ ಹಲವು ಕಡೆಗಳಲ್ಲಿ ಸೋಲಾರ್ ಪೆನಲ್, ವಾಕಿ ಟಾಕಿಗಳು ಸ್ಪೋಟಗೊಂಡಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಪೇಜರ್‌ಗಳನ್ನು ಗುರಿಯಾಗಿಟ್ಟುಕೊಂಡು ಉಗ್ರ ಸಂಘಟನೆಗಳು ದಾಳಿ ಮಾಡಿರಬೇಕು ಎನ್ನುವುದು ಪ್ರಾಥಮಿಕ ತನಿಖೆಯಿಂದ ದೊರೆತ ಮಾಹಿತಿ.
ಪೇಜರ್ ಗಳನ್ನು ಗುರಿಯಾಗಿಟ್ಟುಕೊಂಡು ಉಗ್ರ ಸಂಘಟನೆಗಳು ದಾಳಿ ಮಾಡಿರಬೇಕು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಗಾಯಗೊಂಡಿರುವ ಜನರು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಲೆಬನಾನ್ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q