ಶ್ರೀನಗರ: ಶುಕ್ರವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಡ್ರೋನ್ ಗಳು ಮತ್ತು ಕ್ಷಿಪಣಿಗಳ ಮೂಲಕ ಭಾರತೀಯ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಲು ಪಾಕಿಸ್ತಾನ ವಿಫಲ ಪ್ರಯತ್ನ ಮಾಡಿದ ನಂತರ ಸರಣಿ ಸ್ಫೋಟಗಳು ಮತ್ತು ಸೈರನ್ ಗಳು ಕೇಳಿಬಂದವು.
ನಸುಕಿನ ಜಾವ 3:50 ರಿಂದ 4:45 ರ ನಡುವೆ ಕೇಳಿದ ಸ್ಫೋಟಗಳಿಂದ ಜಮ್ಮು ನಗರದ ಕೆಲವು ಭಾಗಗಳಲ್ಲಿ ಕತ್ತಲೆಯಾಗಿದ್ದು, ಆಕಾಶದಲ್ಲಿ ಯುದ್ಧದ ಸನ್ನಿವೇಶ ಗೋಚರವಾಯಿತು. ಭದ್ರತಾ ಪಡೆಗಳು ತ್ವರಿತವಾಗಿ ಪ್ರತಿಕ್ರಿಯಿಸಿ ಡ್ರೋಣ್ ಗಳನ್ನು ಹೊಡೆದುರುಳಿಸಿವೆ.
ರಕ್ಷಣಾ ಅಧಿಕಾರಿಗಳ ಪ್ರಕಾರ, ಪಾಕಿಸ್ತಾನ ಕಳೆದ ತಡರಾತ್ರಿ ಜಮ್ಮು, ಪಠಾಣ್ಕೋಟ್, ಉಧಂಪುರ ಮತ್ತು ಇತರ ಪ್ರದೇಶಗಳಲ್ಲಿನ ಮಿಲಿಟರಿ ಸ್ಥಾಪನೆಗಳ ಮೇಲೆ ಸಂಘಟಿತ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿವೆ. ಭಾರತೀಯ ಪಡೆಗಳು ವೈಮಾನಿಕ ಬೆದರಿಕೆಗಳನ್ನು ಯಶಸ್ವಿಯಾಗಿ ತಡೆದವು, ಒಳಬರುವ ಸಾಧನಗಳನ್ನು ತಟಸ್ಥಗೊಳಿಸಿದಾಗ ಸ್ಫೋಟಗಳನ್ನು ತೋರಿಸುವ ವೀಡಿಯೊಗಳಿವೆ.
ಉರಿಯ ಮೊಹುರಾ ಬಳಿ ಪಾಕಿಸ್ತಾನದ ಶೆಲ್ ವಾಹನಕ್ಕೆ ಡಿಕ್ಕಿ ಹೊಡೆದಾಗ ನರ್ಗಿಸ್ ಬೇಗಂ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಹಫೀಜಾ ಎಂಬ ಮತ್ತೊಬ್ಬ ಮಹಿಳೆ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಯುದ್ಧ ಪರಿಸ್ಥಿತಿ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮುಂದಿನ ಎರಡು ದಿನಗಳವರೆಗೆ ಎಲ್ಲಾ ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ರಜೆ ಘೋಷಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————