ಬೆಳಗಾವಿ : ಪಾಪಿ ಪತಿ ಚಾಕುವಿನಿಂದ ಪತ್ನಿಯ ಕತ್ತು ಕೋಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ.ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತ್ನಿ ಶಬಾನಾ(28) ಹತ್ಯೆಗೈದು ಆರೋಪಿ ಪತಿ ಮೆಹಬೂಬ್ ಸಾಬ್ ಸವದತ್ತಿ ಠಾಣೆಗೆ ಶರಣಾಗಿದ್ದಾನೆ.
ಬೀಡಿ ಗ್ರಾಮದ ಶಬಾನಾ ಜೊತೆ ಮುನವಳ್ಳಿ ನಿವಾಸಿ ಮೆಹಬೂಬ್‌ಸಾಬ್ ವಿವಾಹವಾಗಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಶಬಾನಾ ಪತಿಯಿಂದ ದೂರವಾಗಿ, ತನ್ನ ಒಂಬತ್ತು ವರ್ಷದ ಮಗ, ಆರು ವರ್ಷದ ಮಗಳ ಜೊತೆ ಪ್ರತ್ಯೇಕವಾಗಿ ಶಬಾನಾ ಸವದತ್ತಿಯ ಅಯ್ಯಪ್ಪಸ್ವಾಮಿ ನಗರದಲ್ಲಿ ವಾಸವಿದ್ದಳು.
ಇಂದು ಬೆಳಗ್ಗೆ ಮನೆಗೆ ಆಗಮಿಸಿ ಶಬಾನಾ ಜೊತೆ ಪತಿ ಮೆಹಬೂಬ್‌ಸಾಬ್ ಗಲಾಟೆ ಮಾಡಿಕೊಂಡಿದ್ದ. ಬಳಿಕ ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈದು ಪೊಲೀಸ್ ಠಾಣೆಗೆ ಆರೋಪಿ ಮೆಹಬೂಬ್‌ಸಾಬ್ ಶರಣಾಗಿದ್ದಾನೆ.
ಸಧ್ಯ ಪೊಲೀಸರು ಶಬಾನಾ ಕುಟುಂಬಸ್ಥರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಶಬಾನಾ ಕುಟುಂಬಸ್ಥರು ಬೀಡಿ ಗ್ರಾಮದಿಂದ ಸವದತ್ತಿಗೆ ಆಗಮಿಸುತ್ತಿದ್ದಾರೆ. ಸವದತ್ತಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy