ತಿಪಟೂರು: ಇಂದಿನ ಆಧುನಿಕ ಸಮಾಜದಲ್ಲಿ ಶಿಕ್ಷಣದ ಜೊತೆ ಸಂಸ್ಕಾರವನ್ನು ಮೈಗೂಡಿಸಿಕೊಂಡು ಸ್ವಾಸ್ತ್ಯ ಸಮಾಜವನ್ನು ಕಟ್ಟುವಲ್ಲಿ ಪೂಜ್ಯರ ಕೊಡುಗೆ ಅವಿಸ್ಮರಣೀಯವಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರು ತಾಲ್ಲೂಕಿನ ಆಯ್ದ ಶಿಕ್ಷಕರ ಕೊರತೆ ಇರುವ ಶಾಲೆಗಳಾದ ಎಸ್. ಎಲ್.ಬಸವೇ ಗೌಡ ಸಿದ್ದರಾಮಾಕ್ಕ ಪ್ರೌಢ ಶಾಲೆ ಸಾರ್ಥವಳ್ಳಿ, ಹುಲಿಹಳ್ಳಿ ಚಿಕ್ಕಮಲ್ಲಯ್ಯ ಗಂಗಮ್ಮ ಸಂಯುಕ್ತ ಪ್ರೌಢ ಶಾಲೆ ಹಾಲ್ಕುರ್ಕೆ, ಶ್ರೀ ಕಾಡ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆ ಚಿಂದೆನಹಳ್ಳಿ ಗಡಿ, ಶಾಲೆಗಳಿಗೆ ಜ್ಞಾನ ದೀಪ ಶಿಕ್ಷಕರನ್ನು ಒದಗಿಸಿದ್ದು ಮಂಜೂರಾತಿ ಪತ್ರವನ್ನು ತಾಲ್ಲೂಕಿನ ಯೋಜನಾಧಿಕಾರಿ ಉದಯ್ ಕೆ. ಶಾಲೆಯ ಶಿಕ್ಷಕರಿಗೆ ಹಸ್ತಾಂತರಿಸಿದರು.
ಯೋಜನಾಧಿಕಾರಿಯವರು ಮಾಹಿತಿ ನೀಡುತ್ತಾ ಪರಮ ಪೂಜ್ಯರು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಹಿತದೃಷ್ಟಿಯಿಂದ ನಮ್ಮ ಯೋಜನೆಯ ಪಾಲುದಾರ ಬಂಧುಗಳ ಮಕ್ಕಳು ವಿವಿಧ ವೃತ್ತಿಪರ ಕೋರ್ಸ್ ಮಾಡುವ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ, ಶಾಲೆಗಳಲ್ಲಿ ದುಶ್ಚಟ ದುರಭ್ಯಾಸದಿಂದ ದೂರ ಇರಲು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ, ಶಾಲೆಗಳಿಗೆ ಬೆಂಚ್ ಡೆಸ್ಕ್ ಒದಗಣೆ, ಶಾಲಾ ಕೊಠಡಿ ರಚನೆ, ಶಾಲಾ ಮೈದಾನ ರಚನೆ, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸಿನ ವ್ಯವಸ್ಥೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಜ್ಜಲ ಕೊಡುಗೆ ನೀಡುತ್ತಿದ್ದಾರೆಂದರು.
ಈ ಸಂದರ್ಭ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಕಚೇರಿ ತಪಾಸಣಾ ವಿಭಾಗದ ಯೋಜನಾಧಿಕಾರಿ ನಾರಾಯಣ, ಸೇವಾ ವಿಭಾಗದ ಯೋಜನಾಧಿಕಾರಿ ಸುಕೇಶ್ ಹಾಗೂ ತಿಪಟೂರು ಯೋಜನಾ ಕಚೇರಿಯ ಫಂಡ್ ಮ್ಯಾನೇಜರ್ ರೇವಣ್ಣ, ಸುಧಾನ್ವ ಹಾಜರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC