ಕೊರಟಗೆರೆ: ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜಯಂತಿ ಅಂಗವಾಗಿ ಪರಮೇಶ್ವರ್ ಕಪ್– 2025 ಬೃಹತ್ ರಾಜ್ಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಮತ್ತು ಪಟ್ಟಣ ಪಂಚಾಯ್ತಿ ಸದಸ್ಯ ನಂದೀಶ್ ತಿಳಿಸಿದರು.
ಅವರು ಪಟ್ಟಣದ ರಾಜೀವ ಭವನದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿ, ಕೊರಟಗೆರೆ ತಾಲ್ಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಂತಹ ಬೃಹತ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಏಪ್ರಿಲ್ 04, 05, 06ನೇ ತಾರೀಕಿನಂದು ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿವೆ, ಎಲ್ಲಾ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಈ ಕ್ರೀಡೆಗೆ ರಾಜ್ಯದ ಪ್ರತಿಷ್ಟಿತ 24 ಕ್ರಿಕೆಟ್ ತಂಡಗಳು ಹಾಗೂ ಕೊರಟಗೆರೆ ತಾಲೂಕಿನ ಬಲಿಷ್ಟ ಎರಡು ತಂಡಗಳು ಭಾಗವಹಿಸಲಿವೆ, ಈ ಕ್ರೀಡೆಯಲ್ಲಿ ಪ್ರಥಮ ಬಹುಮಾನ 2,22,222 ರೂಗಳು ಹಾಗೂ ಆಕರ್ಷಕ ಟ್ರೋಫಿ, ಎರಡನೇ ಬಹುಮಾನ 1,11,111 ರೂಗಳು ಹಾಗೂ ಆಕರ್ಷಕ ಟ್ರೋಪಿ, ಸರಣಿ ಶ್ರೇಷ್ಠ ಆಟಗಾರನಿಗೆ ಮೋಟಾರ್ ಬೈಕ್ ಬಹುಮಾನ, ಪ್ರತೀ ಪಂದ್ಯಕ್ಕೂ ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ ವೈಯಕ್ತಿಕ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.
ಯುವ ಮುಖಂಡ ಶಿವು ಮಾತನಾಡಿ, ಪಂದ್ಯಾವಳಿಗಳ ಏಪ್ರಿಲ್ 06 ರ ಕಡೆಯ ದಿನ ಭಾನುವಾರದಂದು ರಾಜ್ಯದ ಗೃಹ ಸಚಿವರು ಈ ಪಂದ್ಯಗಳ ಸಂಪೂರ್ಣ ಪ್ರಯೋಜಕರಾದ ಡಾ.ಜಿ.ಪರಮೇಶ್ವರರವರು ಆಗಮಿಸಿ ಕ್ರೀಡಾ ಪಟುಗಳಿಗೆ ಬಹುಮಾನ ನೀಡುವರು, ಏಪ್ರಿಲ್ 4 ರ ಮೊದಲ ದಿನ ಮದ್ಯಾಹ್ನ 3 ಪಂದ್ಯಾವಳಿಗಳ ಉದ್ಘಾಟನೆಯಾಗಲಿದ್ದು, ಉದ್ಘಾಟನೆಗೆ ತುಮಕೂರು ಜಿಲ್ಲೆಯ ಜಿ.ಪಂ.ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಸೇರಿದಂತೆ ಜಿಲ್ಲಾ ಮಟ್ಟದ ತಾಲ್ಲೂಕು ಮಟ್ಟದ ಅಧಿಕಾರಿಗಳು ಆಗಮಿಸಲಿದ್ದಾರೆ, ಎಲ್ಲಾ ಪಂದ್ಯಗಳು ನಾಕೌಟ್ ಮಾದರಿಯಲ್ಲಿ ನಡೆಯಲಿವೆ ಎಂದರು.
ಯುವ ಕಾಂಗ್ರೆಸ್ ಅದ್ಯಕ್ಷ ಬೈರೇಶ್ ಮಾತನಾಡಿ, ಈ ಪಂದ್ಯಾವಳಿಗಳಿಗೆ ಬರುವ ಎಲ್ಲಾ ಕ್ರೀಡಾಪಟುಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ವನ್ನು ವ್ಯವಸ್ಥೆ ಮಾಡಲಾಗಿದ್ದು ಕ್ರೀಡಾಪಟುಗಳಿಗೆ ಸಾರ್ವಜನಿಕರಿಗೂ ಸಹ ಊಟದ ವ್ಯವಸ್ಥೆ ಮಾಡಲಾಗಿದೆ, ಪಂದ್ಯದ ಎಲ್ಲಾ ತೀರ್ಪುಗಾರರು ಬೆಂಗಳೂರಿನ ಕ್ರೀಡಾ ಇಲಾಖೆಯಿಂದ ಆಗಮಿಸಲಿದ್ದು ಆಧುನಿಕ ತಂತ್ರಜ್ಞಾನದ ಮೂರನೇ ಅಂಪೈರ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಅರಕೆರೆ ಶಂಕರ್, ಅಶ್ವಥ್ಥ್ ನಾರಾಯಣ ಯುವ ಕಾಂಗ್ರೆಸ್ ಉಪಾದ್ಯಕ್ಷ ದೀಪಕ್, ಭರತ್, ರಂಜಿತ್, ರಘುವೀರ್, ಕಿರಣ್, ರಾಕೇಶ್, ಮಂಜುನಾಥ್, ಹರೀಶ್, ನಾಗಭೂಷಣ್, ಅಭಿ, ಸೇರಿದಂತೆ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4