ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲ ಖೈದಿಗಳ ಸ್ವರ್ಗ. ದುಡ್ಡು ಕೊಟ್ಟರೆ ಅಲ್ಲಿ ಎಲ್ಲವೂ ಸಿಗುತ್ತದೆ ಎಂದು ಜೈಲಿನಿಂದ ಬಿಡುಗಡೆಯಾದ ಕೈದಿಯೊಬ್ಬ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾನೆ.
ಜೈಲಿನಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್ ಇರುತ್ತದೆ. ಹಾಸಿಗೆಯ ಬೆಡ್ ಶೀಟ್ ನೊಳಗೆ ಮೊಬೈಲ್ ಅಡಗಿಸಿಡಲಾಗುತ್ತದೆ. ನೆಟ್ ವರ್ಕ್ ಸಿಗದಂತೆ ಜಾಮರ್ ಅಳವಡಿಸಿದ್ರೂ ಗೋಡೆಗೆ ಮೊಬೈಲ್ ತಾಗಿಸಿದ್ರೆ ನೆಟ್ ವರ್ಕ್ ಸಿಗುತ್ತದೆ ಎಂದು ಆ ವ್ಯಕ್ತಿ ಹೇಳಿದ್ದಾರೆ.
ಬಡ್ಡಿ ದಂಧೆ ಇಲ್ಲಿ ನಡೆಯುತ್ತದೆ. ಎಣ್ಣೆ ಬೇಕಾ ..? ಗಾಂಜಾ ಬೇಕಾ..? ಸಿಗುತ್ತದೆ. ಹೊರಗಡೆಯಿಂದ ಚಿಕನ್ ಮಟನ್ ತರಿಸಿಕೊಳ್ಳಬಹುದು. ನಾನು ಈ ಸೌಲಭ್ಯ ಪಡೆಯಲು 1.30 ಲಕ್ಷ ಕೊಟ್ಟಿದ್ದೇನೆ. ಯಾವ ರೂಮಿನಲ್ಲೂ ಸಿಸಿ ಕ್ಯಾಮೆರಾ ಇಲ್ಲ. ಹೊರಗಡೆ ಆವರಣದಲ್ಲಿ ಮಾತ್ರ ಇದೆ. 35 ಸಾವಿರ ಕೊಟ್ಟರೆ ಹುಡುಗಿಯರನ್ನೂ ಸಹ ಕಳುಹಿಸುತ್ತಾರೆ ಅಂತ ಖೈದಿ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


