ತುಮಕೂರು: ಹಾಡಹಗಲೇ ಮಗಳ ಅಪಹರಣವಾಗಿದ್ದು ಹುಡುಕಿಕೊಡುವಂತೆ ಪೊಲೀಸರ ಬಳಿ ಬಂದರೂ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ ಮಗಳನ್ನ ಹುಡುಕಿ ಕೊಡುವಂತೆ ಪೊಲೀಸ್ ಠಾಣೆ ಎದುರೆ ಪೋಷಕರಿಂದ ಅರೆಬೆತ್ತಲೆ ಪ್ರತಿಭಟನೆ ನಡೆದ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರ ಪೊಲೀಸ್ ಠಾಣೆ ಎದುರು ನಡೆದಿದೆ.
ತಿಪಟೂರು ನಗರದ ಕಂಚಾಘಟ್ಟ ನಿವಾಸಿ ರಂಗಸ್ವಾಮಿ ಕುಟುಂಬದಿಂದ ಪ್ರತಿಭಟನೆ ನಡೆದಿದೆ. ಮಗಳು ಕವನಾ(18) ಳನ್ನ ಹುಡುಕಿ ಕೊಡುವಂತೆ ಒತ್ತಾಯಿಸಿದ್ದರು.
ಹಿರೆಬಿದರೆ ಗ್ರಾಮದ ರಕ್ಷಿತ್ ಎಂಬಾತನನ್ನ ಪ್ರೀತಿಸುತ್ತಿದ್ದ ಕವನಾಳನ್ನು ಯುವಕನ ತಾಯಿ ಆಟೋದಲ್ಲಿ ಬಂದು ಕರೆದೊಯ್ದಿದ್ದಾರೆ ಎಂಬ ಆರೋಪಿಸಿದ್ದರು.
ಯುವತಿ ಮನೆಗೆ ಬಂದು ಪೋಷಕರನ್ನ ಕೂಡಿ ಹಾಕಿ ಅಪಹರಣ ಆರೋಪ ಮಾಡಲಾಗಿತ್ತು. ದೂರು ನೀಡಲು ಬಂದ ಪೋಷಕರಿಗೆ ಸ್ಪಂದಿಸದ ಪೊಲೀಸರ ವಿರುದ್ದ ರೊಚ್ಚಿಗೆದ್ದ ಪೋಷಕರು ಠಾಣೆ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ನಂತರ ಅವರನ್ನು ಸಮಾಧಾನಪಡಿಸಿದ ಪೊಲೀಸರು ಪ್ರತಿಭಟನೆ ಮುಂದುವರೆಸದಂತೆ ತಡೆದರು. ರಾತ್ರಿ ಪ್ರಿಯಕರನೊಂದಿಗೆ ಠಾಣೆ ಬಂದ ಯುವತಿ ಕವನಾ., ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಒಪ್ಪಿದರು. ಮಗಳ ಪ್ರೀತಿಗೆ ಒಪ್ಪಿದ ಪೋಷಕರು. ಎರಡು ಮನೆಯವರಿಂದ ಮದುವೆ ಒಪ್ಪಿಗೆ ದೊರೆತ ನಂತರ ಪ್ರಕರಣ ಸುಖಾಂತ್ಯ ಕಂಡಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW