ತಿಪಟೂರು:ರಾಗಿ ಹಾಗೂ ಇತರ ಬೆಳೆ ಬೆಳೆದ ರೈತರು ಅಕಾಲಿಕ ಮಳೆಯಿಂದಾಗಿ ಸಂಕಷ್ಟಕ್ಕೀಡಾಗಿದ್ದು, ಅವರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಕಾಂಗ್ರೆಸ್ ನ ಮಾಜಿ ತಾಲೂಕು ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಅವರು ಹೇಳಿದ್ದಾರೆ.
ತಾಲ್ಲೂಕಿನಲ್ಲಿ ಸಾವಿರಾರು ಎಕರೆ ರಾಗಿ ಹಾಗೂ ಇತರೆ ಬೆಳೆ ಬಿತ್ತನೆ ಮಾಡಿರುವ ನಡುವೆಯೇ ಅಕಾಲಿಕ ಮಳೆಯಾಗಿದ್ದು, ಪರಿಣಾಮವಾಗಿ ಶೇ.80ರಷ್ಟು ಬೆಳೆ ನಾಶವಾಗಿದೆ. ರಾಗಿ ಬೆಳೆ ಮಳೆಯಿಂದ ನೆಲಕಚ್ಚಿದೆ. ರಾಗಿ ಮೊಳಕೆ ಬರುತ್ತಿದೆ. ಹಾಗಾಗಿ ಜಾನುವಾರುಗಳಿಗೆ ಕನಿಷ್ಠ ಮೇವು ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ತೋಟಗಾರಿಕೆ ಬೆಳೆಗಳು, ತರಕಾರಿ, ಸೊಪ್ಪು, ಹೂವು, ಸಂಪೂರ್ಣ ನೆಲಕಚ್ಚಿದೆ. ಆರೆ ಸರ್ಕಾರ 2.5 ಎಕರೆ ಎಂದರೇ 1 ಹೆಕ್ಟೇರ್ ಗೆ ಕೇವಲ 6,800 ರೂ. ಗಳ ಪರಿಹಾರಧನ ನೀಡುವುದಾಗಿ ತಿಳಿಸಿದೆ. ಇದು ಬಹಳ ಕನಿಷ್ಠ ಪರಿಹಾರವಾಗಿದ್ದು, ಪೆಟ್ರೋಲ್, ಡೀಸೆಲ್ ಕೂಡ ಬೆಲೆ ಗಗನಕ್ಕೇರಿದೆ. ರೈತರಿಗೆ ನೀಡಲು ತಿಳಿಸಿರುವ ಸಹಾಯಧನ ಉಳುಮೆಗೂ ಸಾಲದಾಗಿದೆ. ಆದ್ದರಿಂದ ಕೂಡಲೆ ಸರ್ಕಾರ ಹೆಚ್ಚೆತ್ತುಕೊಂಡು ಪರಿಹಾರ ಧನವನ್ನು ಕನಿಷ್ಠ ಹೆಕ್ಟೇರ್ ಗೆ 20,000 ರೂ. ನೀಡಬೇಕು. ತೋಟಗಾರಿಕೆ ಬೆಳೆಯ ಸಹಾಯ ಧನವನ್ನೂ ಹೆಚ್ಚಿಸಬೇಕು. ಜಾನುವಾರುಗಳಿಗೆ ಉಚಿತ ಮೇವು ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700