ತುಮಕೂರು: ರಾಜ್ಯದ ಪರಿಷತ್ ಚುನಾವಣೆ ಬಂದಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಲಿದೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೇ ಸ್ವರ್ಗ ಸೃಷ್ಠಿಸುತ್ತೇವೆ ಎಂದು ಉದ್ದುದ್ದ ಭಾಷಣ ಮಾಡಿದ್ದ ಬಿಜೆಪಿ ನಾಯಕರು, ಇಂದು ಕೇವಲ ದಿನದೂಡುತ್ತಾ ಭ್ರಷ್ಟ ಅಧಿಕಾರಿಗಳಿಂದ ವಸೂಲಿ ಮಾಡುತ್ತಾ ಇದ್ದಾರೆ. ಇದರಿಂದಾಗಿ ಜನ ಬೇಸತ್ತಿದ್ದಾರೆ. ಈ ಚುನಾವಣೆ ಗ್ರಾಮ ಪಂಚಾಯಿತಿ ಪಾಲಿಕೆ ಸದಸ್ಯರು ಮತ ನೀಡುವ ಚುನಾವಣೆಯಾಗಿದ್ದು ಇದುವರೆಗೂ ಯಾವಬ್ಬ ಜನ ಪ್ರತಿನಿಧಿಯೂ ಸರ್ಕಾರದಿಂದ ಕನಿಷ್ಠ ಒಂದು ಲಕ್ಷ ರೂ.ಗಳ ಅನುದಾನವನ್ನೂ ಪಡೆದಿಲ್ಲಾ. ಮತ ನೀಡಿದ ಜನರಿಗೆ ಕನಿಷ್ಠ ಸೌಕರ್ಯ ಮಾಡುವ ಕೆಲಸ ಮಾಡಲು ಈ ಸರ್ಕಾರ ಅವಕಾಶ ನೀಡಿಲ್ಲ ಎಂದು ಅವರು ಆರೋಪಿಸಿದರು.
ಮಹಾತ್ಮ ಗಾಂಧಿ ಕಂಡ ಕನಸಾದ ಗ್ರಾಮ ಸ್ವರಾಜ್ಯ ಮರೀಚಿಕೆಯಾಗಿದೆ. ಭಾರತ ಹಳ್ಳಿಗಳ ರೈತರ ದೇಶ ಕೇವಲ ಕಂದಾಯದ ಆಧಾರದ ಮೇಲೆ ಕಾರ್ಪೊರೇಟ್ ರವರಿಗೆ ಮನ್ನಣೆ ನೀಡಿ ರೈತರನ್ನು ಕಡೆಗಣಿಸುತ್ತಿದ್ದಾರೆ. ಗ್ರಾಮಗಳ ವಿಕಾಸ ಮತ್ತು ಅಭಿವೃದ್ದಿಯಿಂದ ದೇಶದ ಅಭಿವೃದ್ದಿ ಸಾಧ್ಯ . ಪ್ರಾಜಾಪ್ರಭುತ್ವ ಸಾಕಾರವಾಗಬೇಕಾದರೇ ಅಧಿಕಾರ ವಿಕೇಂದ್ರೀಕರಣವಾಗಬೇಕು ಆದರೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೆಲವೇ ವ್ಯಕ್ತಿಗಳ ಹಿತಾಸಕ್ತಿಗೆ ಪ್ರಜಾಪ್ರಭುತ್ವವನ್ನು ಹಿಮ್ಮುಖಮಾಡುತ್ತಿದೆ ಎಂದರು.
ನೋಟ್ ಬ್ಯಾನ್ ಮತ್ತು ಬ್ಯಾಂಕ್ ಗಳ ವಿಲೀನ ಇದಕ್ಕೆ ಒಂದು ಉದಾಹರಣೆ . ಹಳ್ಳಿಯ ಜನ ಬ್ಯಾಂಕ್ ವಹಿವಾಟಿಗೆ ನಗರಗಳಿಗೆ ಬರಲು ಪ್ರತಿ ಬಾರಿ 100 ರಿಂದ 200 ರೂ ವ್ಯಯ ಮಾಡಬೇಕಾಗಿದೆ. ಒಂದು ದಿನದ ಸಮಯ ಹಾಳಾಗುತ್ತಿಗೆ. ಕೇಂದ್ರದ ಬಿಜೆಪಿ ನಾಯಕರು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದರು. ಇದೆಲ್ಲದರ ಬಗ್ಗೆ ಅರಿವು ಇರುವ ಪ್ರಭುದ್ದ ಮತ ಬಾಂಧವರು ಚುನಾಯಿತ ಪ್ರತಿನಿಧಿಗಳು ಪಕ್ಷಾತೀತವಾಗಿ ಅನ್ನ ಕೊಡುವ ಕೈ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಜಿಲ್ಲೆಯಲ್ಲೂ ಬಿಜೆಪಿ ಭಿನ್ನರ ತವರೂರಾಗಿದೆ. ಸಂಘ ಪರಿವಾರದ ಮೂಲಕ ಒಂದು ಸಮುದಾಯ ಸರ್ಕಾರದಲ್ಲಿ ಹಿಡಿತ ಸಾಧಿಸಲು ನಾಯಕರುಗಳನ್ನು ಕಡೆಗಣಿಸಿದೆ. ಮುಂದೆ ಇದಕ್ಕೆಲ್ಲಾ ಜನರೇ ಉತ್ತರ ಕೊಡಲಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಸೋಲು ನಿಶ್ಚಿತ ಎಂದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700