ಸರಗೂರು: ಕಳೆದ 10 ವರ್ಷಗಳಿಂದ ತಾಲೂಕಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿರುವ ಕಾರ್ಯಕರ್ತರ ಕನಸನ್ನು ನನಸು ಮಾಡಲು ಕ್ಷೇತ್ರದಲ್ಲಿ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುವುದಾಗಿ ಕೆ.ಎಂ.ಕೃಷ್ಣನಾಯಕ ತಿಳಿಸಿದರು.
ಸೋಮವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿ. ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರು ಅನುಭವಿಸುತ್ತಿರುವ ನೋವನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಲು ಶ್ರಮಿಸಬೇಕು ಎಂದರು.
ಮುಂದಿನ ಎರಡೂರು ತಿಂಗಳಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಚುನಾವಣೆ ನಡೆಯಲಿದ್ದು, ಮುಖಂಡರು ಹಾಗೂ ಕಾರ್ಯಕರ್ತರು ತಮ್ಮಲ್ಲಿರುವ ಅಸಮಾಧಾನ ಮರೆತು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದ ಅವರು, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಕೂಚಿ ಎಂದರು.
ತಾಲೂಕು ಸೇರಿದಂತೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಭ್ರಷ್ಟಾಚಾರ, ದುರಾಡಳಿತ, ಹಗರಣಗಳಲ್ಲಿ ಸರ್ಕಾರ ನಿರತವಾಗಿದೆ. ರಾಜ್ಯದ ಅಭಿವೃದ್ಧಿಗೆ ಹಣಕಾ ಸಿನ ಕೊರತೆ ಎದುರಾಗಿದ್ದು, ಖಜಾನೆ ಖಾಲಿಯಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಕೃಷ್ಣನಾಯಕ ಅವರ ಸಮ್ಮುಖದಲ್ಲಿ ನೂರಾರು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು. ಅಲ್ಲದೇ ಬೆಂಗಳೂರಿನ ಜೆ.ಪಿ.ಭವನದಲ್ಲಿ ಜೆಡಿಎಸ್ ಗೆ ಸೇರ್ಪಡೆಗೊಂಡು ಪಟ್ಟಣಕ್ಕೆ ಆಗಮಿಸಿದ ಕೆ.ಎಂ.ಕೃಷ್ಣನಾಯಕ ಅವರು ಮೊದಲಿಗೆ ಜಿ.ಬಿ.ಸರಗೂರಿನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕ್ಯಾತನಹಳ್ಳಿ, ಹಂಪಾಪುರ–ಹೊಮರಗಳೆ ಹೊಮ್ಮರಗಳ್ಳಿ ಮಾರ್ಗವಾಗಿ ಹ್ಯಾಂಡ್ ಪೋಸ್ಟ್ ಗೆ ತಲುಪಿ ಹ್ಯಾಂಡ್ ಪೋಸ್ಟ್ ನ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ದಾರಿಯುದ್ದಕ್ಕೂ ಕೃಷ್ಣನಾಯಕರಿಗೆ ಜೆಡಿಎಸ್ ಕಾರ್ಯ ಕರ್ತರು, ಮುಖಂಡರು ಹಾರ ತುರಾಯಿ ಹಾಕಿ ಅಭಿನಂದಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಿಂದ ಕೃಷ್ಣನಾಯಕ ಅವರು ಸಾವಿರಾರು ಕಾರ್ಯಕರ್ತರ ಜೊತೆ ಕಾಲ್ನಡಿಗೆಯಲ್ಲಿ ಜೆಡಿಎಸ್ ಕಚೇರಿಗೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಕಾರ್ಯಕತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಕೋಟೆ, ಸರಗೂರು ತಾಲೂಕಿನ ಜೆಡಿಎಸ್ ಅಧ್ಯಕ್ಷರಾದ ರಾಜೇಂದ್ರ ಗೋಪಾಲಸ್ವಾಮಿ, ಮಾಜಿ ಅಧ್ಯಕ್ಷರಾದ ಸಿ.ವಿ.ನಾಗರಾಜು, ನರಸಿಂಹೇಗೌಡ, ಲಿಂಗೇಗೌಡ, ಸಿಂಡೇನಹಳ್ಳಿ ಯತೀಶ್ ಕುಮಾರ್, ಶ್ಯಾಮ್ ಸುಂದರ್, ಮಳಲಿ ಶಾಂತಕುಮಾರ್, ಯೋಗ ನರ ಸಿಂಹ.ಡಿ.ಆರ್.ಮಹೇಶ್, ಎಂ.ಡಿ.ಮಂಚಯ್ಯ, ಹೋ.ಕೆ.ಮಹೇಂದ್ರ, ಗೆಂಡತ್ತೂರು ಪ್ರಕಾಶ್, ಸಿದ್ದೇಗೌಡ, ಸುದೀರ್, ಮಾಯಿ ಗೌಡ, ಶಶಿಧರ್, ಹೆಚ್.ಪಿ.ಪ್ರಕಾಶ್, ಎಂ.ಪಿ. ಶಂಕರ್, ಕೃಷ್ಣಗೌಡ, ಶಿವಶಂಕರ್, ಪ್ರಶಾಂತ್, ಪ್ರಸನ್ನ, ಶಿವಯ್ಯ, ಕಾಳಪ್ಪಾಜಿ, ಕೃಷ್ಣಪ್ಪ, ಸೋಮಲಿಂಗ, ಶಿವಪ್ಪಶೆಟ್ಟಿ, ನಾಗೇಂದ್ರ, ಸತೀಶ್, ನಾಗೇಗೌಡ, ಶಿವಕು ಮಾರ್, ಜವರೆಗೌಡ, ಮಾಯಪ್ಪ ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC