ಜೋಧ್ ಪುರ: ತುರ್ತು ಬಾಗಿಲು ತೆರೆದಿದ್ದಕ್ಕಾಗಿ ಜೋಧ್ ಪುರದಿಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ.
ನಿರ್ಗಮನದ ಸಮಯದಲ್ಲಿ ಪ್ರಯಾಣಿಕ ತುರ್ತು ನಿರ್ಗಮನ ಫ್ಲಾಪ್ ನ್ನು ತೆರೆದಿದ್ದರ ಪರಿಣಾಮ ವಿಮಾನ ಟೇಕ್ ಆಫ್ ಆಗುವುದು 20 ನಿಮಿಷಗಳ ವಿಳಂಬವಾಯಿತು.
ಕ್ಯಾಬಿನ್ ಸಿಬ್ಬಂದಿ ಸುರಕ್ಷತಾ ಸೂಚನೆಗಳನ್ನು ನೀಡುತ್ತಿದ್ದಾಗ ಮತ್ತು ವಿಮಾನವು ಟೇಕ್ ಆಫ್ ಆಗಲು ಸಿದ್ಧವಾದಾಗ ಈ ಘಟನೆ ಸಂಭವಿಸಿದೆ. ಬ್ಯಾಂಕ್ ಉದ್ಯೋಗಿ ಸಿರಾಜ್ ಕಿದ್ವಾಯಿ ಬಂಧಿತ ಪ್ರಯಾಣಿಕನಾಗಿದ್ದಾರೆ.
ತಾನು ಆಕಸ್ಮಿಕವಾಗಿ ತುರ್ತು ನಿರ್ಗಮನ ಫ್ಲಾಪ್ ತೆರೆದಿರುವುದಾಗಿ ಪ್ರಯಾಣಿಕ ಹೇಳಿದ್ದಾರೆ. ಈ ವೇಳೆ , ವಿಮಾನ ಸಿಬ್ಬಂದಿ ತ್ವರಿತವಾಗಿ ಕ್ರಮ ಕೈಗೊಂಡರು ಮತ್ತು ಪೈಲಟ್‌ಗೆ ತಕ್ಷಣವೇ ಎಚ್ಚರಿಕೆ ನೀಡಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4