ಧಾರವಾಡ: ಕೊಲೆ ಆರೋಪದಡಿ ಬಂಧಿತನಾಗಿರುವ ಪಾತಕಿಗೆ ಪ್ರೇಯಸಿ ಜತೆ ಕಾಲ ಕಳೆಯಲು ಪೊಲೀಸರೇ ಅವಕಾಶ ಮಾಡಿಕೊಟ್ಟ ಪ್ರಸಂಗ ನಡೆದಿದೆ.
ಹುಬ್ಬಳ್ಳಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರು ಪಡಿಸಲು ಬಳ್ಳಾರಿ ಜೈಲಿನಿಂದ ಪಾತಕಿ ಬಚ್ಚಾಖಾನ್ ನನ್ನು ಕರೆತರಲಾಗಿತ್ತು. ನಿಗದಿಯಂತೆ ಆತನನ್ನು ಖಾಸಗಿ ಹೊಟೇಲ್ ಗೆ ಪೊಲೀಸರೇ ಕರೆದುಕೊಂಡು ಹೋಗಿದ್ದಾರೆ.
ಆಗ ಅಲ್ಲಿನ ಕೊಠಡಿಯೊಂದರಲ್ಲಿ ಆತನ ಪ್ರೇಯಸಿ ಕಾಯುತ್ತಿದ್ದಳು. ಬಚ್ಚಾಖಾನ್ ಆಕೆಯೊಂದಿಗೆ ಏಕಾಂತದಲ್ಲಿದ್ದಾಗ, ಆತನನ್ನು ಕರೆತಂದ ಬಳ್ಳಾರಿ ಪೊಲೀಸರೇ ಕೊಠಡಿ ಹೊರಗೆ ಕಾವಲು ಕಾದಿದ್ದರು ಎನ್ನಲಾಗಿದೆ.
ವಿಷಯ ತಿಳಿದ ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ ಅವರು ತಮ್ಮ ತಂಡದೊಂದಿಗೆ ಹೋಟೆಲ್ ಮೇಲೆ ದಾಳಿ ಮಾಡಿ ಬಚ್ಚಾಖಾನ್ ನನ್ನು ಬಂಧಿಸಿ ವಿದ್ಯಾಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz