ಗುಬ್ಬಿ: ತಾಲ್ಲೂಕಿನ “ತುಮಕೂರು ಮಿತ್ರ” ದಿನಪತ್ರಿಕೆ ವರದಿಗಾರ ಜಿ.ಆರ್.ರಮೇಶ್ ಗೌಡ ಎಂಬವರ ಮೇಲೆ ನವದೆಂಬರ್ 14ರಂದು ಭಾನುವಾರ ಮಧ್ಯಾಹ್ನ ಗುಬ್ಬಿ ನಗರದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳ ಗುಂಪು ಹಲ್ಲೆ ನಡೆಸಿದ್ದು, ಇದನ್ನು ಖಂಡಿಸಿ, ಪತ್ರಕರ್ತನ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗುಬ್ಬಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಗುಬ್ಬಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಮಸ್ಯೆ ಎನೇ ಇದ್ದರು ಕಾನೂನಾತ್ಮಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುವುದು ಸೂಕ್ತ ಕ್ರಮ ಅದನ್ನು ಬಿಟ್ಟು ಓರ್ವ ಪತ್ರಕರ್ತನ ಮೇಲೆ ಸಾರ್ವಜನಿಕವಾಗಿ ದೈಹಿಕವಾಗಿ ಹಲ್ಲೆ ಮಾಡಿರುವುದು ಖಂಡನೀಯವಾದ ವಿಚಾರ ಈ ಘಟನೆಯಿಂದ ಪತ್ರಕರ್ತರಲ್ಲಿ ತೀವ್ರ ಕಳವಳ ಉಂಟು ಮಾಡಿದೆ ಈ ಘಟನೆಯ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇಯಿಸಿದರು.
ಈ ಸಂದರ್ಭದಲ್ಲಿ ಗುಬ್ಬಿ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಅಂಜೀನಪ್ಪ, ಉಪಾಧ್ಯಕ್ಷ ಕೆ.ಟಿ.ರಂಗಸ್ವಾಮಿ, ಕಾರ್ಯದರ್ಶಿ ಪ್ರಸನ್ನಕುಮಾರ್, ವೀರಭದ್ರಯ್ಯ, ಕೆಂಪರಾಜು, ರಾಜೇಶ್, ಗಂಗಾಧರ್ ಸ್ವಾಮಿ, ನರಸಿಂಹಮೂರ್ತಿ. ಆನಂದ್ ದೀಕ್ಷಿತ್, ರಾಘವೇಂದ್ರ, ಕೆಂಪರಾಜು, ಮಂಜುನಾಥ್, ಹನುಮಂತರಾಜು, ಸಂತೋಷ್, ಮೋಹನ್, ಸೋಮಸುಂದರ್, ಶಾಂತರಾಜು ಗುಬ್ಬಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಭಾಗವಹಿಸಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700