ತುರುವೇಕೆರೆ: ಪಟ್ಟಣದ ಅಭಿವೃದ್ಧಿಗಾಗಿ ಮತ್ತು ರಸ್ತೆ ಅಭಿವೃದ್ಧಿಗಾಗಿ ಕಳೆದ ವರ್ಷ ದಬ್ಬೇಘಟ್ಟ ರಸ್ತೆಯಲ್ಲಿನ ಮಳಿಗೆಗಳನ್ನು ತೆರವುಗೊಳಿಸಲು ಪಟ್ಟಣ ಪಂಚಾಯ್ತಿ ಆದೇಶ ನೀಡಿತ್ತು. ಅದರಂತೆ ಕೆಲ ಮಳಿಗೆಗಳು ತೆರವುಗೊಂಡಿದ್ದು, ಬಿಟ್ಟರೆ ಇನ್ನುಳಿದ ಹಲವು ಹಾಗೇ ಉಳಿದಿರುವುದರಿಂದ ರಸ್ತೆ ಅಗಲೀಕರಣ ಮತ್ತು ಪಟ್ಟಣದ ಅಭಿವೃದ್ಧಿಗೆ ಅಡ್ಡಗಾಲಾಗಿವೆ.
ತೆರವುಗೊಳಿಸದೇ ಇರುವ ಮಳಿಗೆಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ , ತಾಲ್ಲೂಕು ಆಡಳಿತ ಮತ್ತು ಪಟ್ಟಣ ಪಂಚಾಯ್ತಿಯ ಕಾರ್ಯವೈಖರಿಯ ವಿರುದ್ಧ ” ತುರುವೇಕೆರೆ ತಾಲ್ಲೂಕು ಅಭಿವೃದ್ಧಿ ವೇದಿಕೆ” ಪ್ರತಿಭಟನೆ ಮತ್ತು ಅಹೋರಾತ್ರಿ ಮುಷ್ಕರವನ್ನು ಪ್ರಾರಂಭಿಸಿದ್ದಾರೆ.
ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಇಲ್ಲಿನ ಜನತೆ ಪ್ರತಿಭಟನೆಯನ್ನು ನಡೆಸಿತು. ಕೆಲಹೊತ್ತು ದಬ್ಬೇಘಟ್ಟ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದ ಪ್ರತಿಭಟನಾಕಾರರು, ತಮ್ಮ ಗುರಿ ಈಡೇರುವವರೆಗೂ ಅಹೋರಾತ್ರಿ ಮುಷ್ಕರ ನಡೆಸುವುದಾಗಿ ಮಾಧ್ಯಮದ ಮೂಲಕ ಪಂಚಾಯ್ತಿಗೆ ಎಚ್ಚರಿಕೆ ರವಾನಿಸಿದರು.
ಈ ಪ್ರತಿಭಟನೆಗೆ ತಾಲ್ಲೂಕು ರೈತ ಸಂಘ, ಜಯ ಕರ್ನಾಟಕ ವೇದಿಕೆ, ಸಿ.ಐ.ಟಿ.ಯು, ಕನ್ನಡ ರಕ್ಷಣ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ತಾಲ್ಲೂಕು ವಕೀಲರ ಸಂಘ , ದಬ್ಬೇಘಟ್ಟ ರಸ್ತೆ ಹೋರಾಟ ಸಮಿತಿ, ಆಟೋ ಮಾಲೀಕರ ಮತ್ತು ಚಾಲಕರ ಸಂಘ , ಜಯಕರ್ನಾಟಕ ಜನಪರ ವೇದಿಕೆ , ಕರ್ನಾಟಕ ಸಂಘರ್ಷ ಸಮಿತಿ , ಬೀದಿಬದಿ ವ್ಯಾಪಾರಿಗಳ ಸಂಘ ಮತ್ತು ಪತ್ರಿಕಾ ವರದಿಗಾರ ಸಂಘ ಹಾಗೂ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ದೊರೆತಿದೆ.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700