ನಟಿ ಪವಿತ್ರ ಗೌಡ ಅವರು ಇತ್ತೀಚಿಗೆ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ಅವರ ಟ್ಯಾಟೂ ಸ್ಟುಡಿಯೋವೊಂದಕ್ಕೆ ಹೋಗಿದ್ದು, ಅಲ್ಲಿ ತಮ್ಮ ಕೈ ಮೇಲೆ 777 ಎಂಬ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹಾಗೂ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಲ್ಲಿ ಸಣ್ಣ ಹಾರ್ಟ್‌ಮಾರ್ಕ್ ಕೂಡಾ ಇದ್ದು, ಇದಕ್ಕೆ ಫ್ಯಾನ್ಸ್‌ಗಳು ನಾನಾ ಅರ್ಥ ಕಲ್ಪಿಸಿ ಕಮೆಂಟ್ ಮಾಡಿದ್ದಾರೆ.
ಪವಿತ್ರ ಗೌಡಗೆ ನಟ ದರ್ಶನ್ ಜೊತೆಗಿನ ಆಪ್ತತೆ ಎಲ್ಲರಿಗೂ ಗೊತ್ತಿದೆ. ದರ್ಶನ್ ಅವರ ಹುಟ್ಟಿದ ವರ್ಷ 1977. ಪವಿತ್ರ ಮಗಳು ಹುಟ್ಟಿದ್ದು ನವೆಂಬರ್ 7. ಹೀಗಾಗಿ 777 ಟ್ಯಾಟ್ ಹಾಕಿಕೊಂಡಿರಬಹುದು ಎಂದು ಫ್ಯಾನ್ಸ್ ಊಹೆ ಮಾಡಿದ್ದಾರೆ. ಇನ್ನು ಕೆಲವರು ಇದನ್ನು ದರ್ಶನ್ ಅವರ ಕಾರಿನ ನಂಬರ್ ಎಂದು ಹೇಳಿಕೊಂಡಿದ್ದು, ನಾನಾ ಕಮೆಂಟ್ ಗಳು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


