ತುಮಕೂರು: ಗೃಹ ಸಚಿವರ ಗ್ರಾಮದ ದಲಿತ ಕಾಲೋನಿಗೆ ಪೇಜಾವರ ಶ್ರೀಗಳು ಭೇಟಿ ನೀಡಿದರು. ತುಮಕೂರಿನ ಗೊಲ್ಲಹಳ್ಳಿ ಜನತಾ ಕಾಲೋನಿಗೆ ಭೇಟಿ ನೀಡಿದ ಶ್ರೀಗಳ ಪಾದಪೂಜೆ ನೆರವೇರಿಸುವ ಮೂಲಕ ದಲಿತ ದಂಪತಿ ಅತಿಥಿ ಸತ್ಕಾರ ಮಾಡಿದರು.
ಮಂಜುನಾಥ್, ಚೈತ್ರಾ ಹಾಗೂ ಬಸವರಾಜು ಶಶಿಕಲಾ ದಂಪತಿಗಳು ಶ್ರೀಗಳ ಪಾದಪೂಜೆ ಮಾಡಿದರು. ಬಳಿಕ ದಲಿತ ದಂಪತಿಗಳಿಂದ ಫಲತಾಂಬೂಲ ಸ್ವೀಕರಿಸಿದ ಸ್ವಾಮೀಜಿ, ದಲಿತ ಕುಟುಂಬದ ಸದಸ್ಯರಿಗೆ ಹಣ್ಣಿನ ಫಲ ನೀಡಿ ಆಶೀರ್ವಾದ ಮಾಡಿದರು.
ದಲಿತ ಮನೆಯಲ್ಲಿ ದೇವರ ಭಾವಚಿತ್ರಕ್ಕೆ ದೀಪ ಹಚ್ಚಿ ಪೂಜೆ ಸಲ್ಲಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ದಲಿತ ಕಾಲೋನಿಯಲ್ಲಿ ಅಶ್ವಥ ಹಾಗೂ ಬೇವಿನ ಗಿಡಗಳನ್ನ ನೆಟ್ಟು ಶುಭ ಹಾರೈಕೆ ಮಾಡಿದರು.
ದಲಿತ ಕಾಲೋನಿಯ ರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಿದರು. ಏತನ್ಮಧ್ಯೆ ಭೀಮರಾಜ ಅರಸು ಪಾರ್ವತಮ್ಮ ದಂಪತಿಗೆ ಕೃಷ್ಣಾನುಗ್ರಹ ಮನೆ ಹಸ್ತಾಂತರ ಮಾಡಿದರು. ಈ ಮನೆಯನ್ನು ಅಂದಾಜು 10 ಲಕ್ಷ ರೂ. ಮೌಲ್ಯದಲ್ಲಿ ನಿರ್ಮಾಣ ಮಾಡಲಾಗಿದೆ. ಹಲವು ದಾನಿಗಳ ಸಹಾಯದಿಂದ ನಿರ್ಮಾಣ ಮಾಡಲಾಗಿದ್ದ ಈ ಹೊಸ ಮನೆಯಲ್ಲಿ ಪೂಜೆ ಸ್ವಾಮೀಜಿ ಪೂಜೆ ನೆರವೇರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4