ಬೀದರ್: ಜಿಲ್ಲೆಯ ಔರಾದಾ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಪಂಚಾಯತ್ ನಿಂದ ನೀಡಲಾಗುವ ಸಾರ್ವಜನಿಕ ಮನೆಗಳ ನಿರ್ಮಾಣಕ್ಕೆ ಗ್ರಾ.ಪಂ. ಬಿಲ್ ಕಲೆಕ್ಟರ್ ಲಂಚ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ.
ಬಿಲ್ ಕಲೆಕ್ಟರ್ ಗಣಪತಿ ಎಂಬವರು ಫಲಾನುಭವಿಗಳ ಮನೆಗೆ ಜಿಪಿಎಸ್ ಮಾಡಿದ ಕೂಡಲೇ ಫಲಾನುಭವಿಗಳಿಂದ 1 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದು, ಈ ಬಗ್ಗೆ ಸ್ಥಳೀಯ ಪತ್ರಕರ್ತರಾದ ಅರವಿಂದ ಮಲ್ಲಿಗೆ ಅವರು ಪ್ರಶ್ನಿಸಿದ್ದು, ಈ ವೇಳೆ ಪಿಡಿಓ ಎದುರೇ ದುಡ್ಡು ತೆಗೆದುಕೊಳ್ಳುತ್ತೇನೆ ಏನು ಮಾಡ್ತೀರಾ ಮಾಡ್ಕೋ ಎಂದು ಉದ್ಧಟತನದಿಂದ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆಗೆ ಬಿಲ್ ಕಲೆಕ್ಟರ್ ಗಣಪತಿ ಇರುತ್ತಾರೆ ಮತ್ತು ಪಿಡಿಓ ಎದುರೇ ಹಣ ತೆಗೆದುಕೊಳ್ಳುತ್ತೇನೆ ಎಂದು ಉದ್ಧಟತನದಿಂದ ಮಾತನಾಡುತ್ತಿದ್ದಾರೆ. ಸಾರ್ವಜನಿಕರ ಕೆಲಸಗಳನ್ನು ಕೂಡ ಸರಿಯಾದ ಸಮಯಕ್ಕೆ ಮಾಡಿಕೊಡುತ್ತಿಲ್ಲ, ಪ್ರಶ್ನಿಸಿದರೆ, ದರ್ಪ, ದುರಾಹಂಕಾರದ ಮಾತುಗಳಿಂದ, ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುತ್ತಿದ್ದಾರೆ ಹೀಗಾಗಿ ಇವರನ್ನು ಕೆಲಸ ವಜಾಗೊಳಿಸುವಂತೆ ಅರವಿಂದ ಮಲ್ಲಿಗೆ ಆಗ್ರಹಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx