ತಿಪಟೂರು: ನಗರ ಹಾಗೂ ತಾಲೂಕಿನ ಜನತೆಗೆ ನಿರಂತರ ಶುದ್ಧ ಕುಡಿಯುವ ನೀರು ಒದಗಿಸಲು ನಾನು ಬದ್ಧನಾಗಿದ್ದೇನೆ ಎಂದು ತಿಪಟೂರು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ಇದರ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ನಗರದ ಜನಸಂಖ್ಯೆ ಈಗಾಗಲೇ ಒಂದು ಲಕ್ಷ ಮೀರುತ್ತಿದ್ದು, ನೀರಿನ ಅವಶ್ಯಕತೆ ಹೆಚ್ಚಾಗುತ್ತದೆ. ಭವಿಷ್ಯದ ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸಬೇಕಿದೆ ಎಂದರು.
ಈಚನೂರು ಕೆರೆ ಸಂಗ್ರಹಗಾರಿಕೆ ಪರ್ಯಾಯ ಮೊಲಗಳಿಂದ ಕುಡಿಯುವ ನೀರು ಒದಗಿಸಲು ಸಮೀಕ್ಷೆ ಮಾಡಿದ್ದು ನೀಲ ನಕ್ಷೆ ತಯಾರಿಸಲಾಗಿದೆ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಚಿವರ ಜೊತೆ ಚರ್ಚಿಸಲಾಗಿದ್ದು, ಕೆರೆಯ ನೀರು ಯಾರ ಸ್ವತ್ತು ಅಲ್ಲ, ಕುಡಿಯುವ ನೀರಿಗೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಕೇಳಿದೆ. ನೀರಿನ ಮೂಲ ಗುರುತಿಸಿ ನಗರದ ಜನತೆಗೆ ನಿರಂತರ ಕುಡಿಯುವನೀರು ಪೂರೈಸುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಅವಶ್ಯಕತೆ ಇರುವ ಕಡೆ ನೂತನ ಪೈಪ್ ಲೈನ್ ಅಳವಡಿಕೆ, ಅವಶ್ಯಕತೆ ಇರುವ ಕಡೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ನಾನು ಹಿಂದೆ ಶಾಸಕನಾಗಿದ್ದಾಗ ನೊಣವಿನಕೆರೆಯಿಂದ ನಗರಕ್ಕೆ ಕುಡಿಯುವ ನೀರು ತರಲು 128 ಕೋಟಿ ಯೋಜನೆ ರೂಪಿಸಿ ನನಗಿಂತ 0.3 ಟಿಎಂಸಿ ನೀರನ್ನು ಆಲಾಟಾ ಮಾಡಿಸಿದ್ದೆ ಕೆಲವರಿಂದ ತಪ್ಪು ಮಾಹಿತಿ ನೀಡಿ ವಿರೋಧ ವ್ಯಕ್ತವಾಯಿತು. ಕೆಲವರು ಕೋಟಿಗೆ ಹೋದರು ಅಲ್ಲಿ ಕೇಸ್ ವಜವಾಗಿದೆ ನೀರು ತರಬೇಕೆಂದು ಅಧಿಕಾರಿಗಳು ತಾಂತ್ರಿಕ ವರದಿ ಆದರಿಸಿಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx