ಪಾವಗಡ: ಪಟ್ಟಣದ ಸಿರಾ ರಸ್ತೆ ನಾಗರಕಟ್ಟೆ ಬಳಿ ಬಸ್ ಗಾಗಿ ಕಾದು ಕುಳಿತಿದ್ದ ಓರ್ವ ವ್ಯಕ್ತಿಯ ಮೇಲೆ ದುರಸ್ತಿ ಕಾರ್ಯದ ವಾಣಿಜ್ಯ ಮಳಿಗೆಯ ದೊಡ್ಡ ಡಿಮ್ಮಿ ಕಳಚಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಭಾನುವಾರ ನಡೆದಿದೆ.
ಚರಂಡಿ ನಿರ್ಮಾಣಕ್ಕಾಗಿ ವಾಣಿಜ್ಯ ಮಳಿಗೆ ಒತ್ತುವರಿ ತೆರವುಗೊಳಿಸಲು ಮಳಿಗೆಯ ಕೆಲ ಭಾಗ ದುರಸ್ತಿಕಾರ್ಯ ನಡೆಯುತ್ತಿದ್ದೂ ಸುಮಾರು ಆರು ತಿಂಗಳುಗಳಿಂದ ಕೆಲ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿದ್ದು , ಈ ಸ್ಥಳದ ಮುಂಭಾಗದಲ್ಲಿ ಪ್ರತಿನಿತ್ಯ ಬಸ್ ಗಾಗಿ ಕಾಯುತ್ತಿರುವುದು ಸರ್ವೇಸಾಮಾನ್ಯವಾಗಿದೆ.
ಭಾನುವಾರ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ವಾಣಿಜ್ಯ ಮಳಿಗೆಯ ಮೇಲ್ಛಾವಣಿಯ ದೊಡ್ಡ ಡಿಮ್ಮಿ ಆಧಾರ ಸ್ಥಂಭವಿಲ್ಲದೆ ಏಕಾಏಕಿ ನೆಲಕ್ಕುರುಳಿದೆ. ಇದೇ ವೇಳೆ ಬಸ್ ಗಾಗಿ ಕಾಯುತ್ತಿದ್ದ ವ್ಯಕ್ತಿಯ ತಲೆಗೆ ದೊಡ್ಡ ಡಿಮ್ಮಿ ಉರುಳಿದೆ. ಪರಿಣಾಮವಾಗಿ ಅವರ ತಲೆ, ಕೈ ಕಾಲುಗಳಿಗೆ ಗಾಯವಾಗಿತ್ತು. ತಕ್ಷಣವೇ ಸ್ಥಳೀಯ ಆಟೋ ಚಾಲಕರು 108 ವಾಹನಕ್ಕೆ ಕರೆ ಮಾಡಿ, ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ವಾಣಿಜ್ಯ ಮಳಿಗೆಯ ಮಾಲಿಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಬಸ್ ಗಾಗಿ ಕಾದುಕುಳಿತುಕೊಳ್ಳುವ ಸಾರ್ವಜನಿಕರು ಜೀವ ಭಯದಿಂದ ಕುಳಿತುಕೊಳ್ಳುವಂತಾಗಿದೆ. ಅಪಾಯಕಾರಿಯಾಗಿರುವ ಈ ಸ್ಥಳದ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದ್ದು, ಮಾಲಿಕನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q