ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರವು VAT ಇಳಿಕೆ ಮಾಡಿದೆ.
ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬುಧವಾರ ತಿಳಿಸಿದ್ದು, ನವೆಂಬರ್ 4ರ ಸಂಜೆ ಪೆಟ್ರೋಲ್ ಹಾಗೂ ಡೀಸೆಲ್ ಎರಡರ ಮೇಲೆ ಕೂಡ 7 ರೂಪಾಯಿ ಇಳಿಕೆ ಮಾಡುತ್ತಿದ್ದೇವೆ ಎಂದು ಅವರು ಘೋಷಿಸಿದ್ದಾರೆ.
ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಧನದ ದರದ ಹೊರೆ ಇಳಿಸುವ ಮೂಲಕವಾಗಿ ದೀಪಾವಳಿಗೆ ಅದ್ಭುತವಾದ ಉಡುಗೊರೆ ನೀಡಿದ್ದಾರೆ. ಈ ಹಬ್ಬಕ್ಕೆ ಸ್ಫೂರ್ತಿ ತುಂಬುವುದಕ್ಕೆ ಕರ್ನಾಟಕ ಸರ್ಕಾರ ಕೂಡ ಬೆಲೆ ಇಳಿಕೆ ಮಾಡಿದೆ ಎಂದು ಅವರು ಹೇಳಿದರು.
ಇದರಿಂದ ನಮ್ಮ ಬೊಕ್ಕಸಕ್ಕೆ 2100 ಕೋಟಿ ರೂಪಾಯಿ ಹೊರೆಯಾದರೂ ನಮ್ಮ ನಾಗರಿಕರಿಗೆ 95.90 ಮತ್ತು 81.50 ಪೆಟ್ರೋಲ್ ಮತ್ತು ಡೀಸೆಲ್ ಗೆ ಕ್ರಮವಾಗಿ ದರವಾಗಲಿದೆ ಎಂದು ಸಿಎಂ ಹೇಳಿದ್ದಾರೆ.