nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಜಯಪುರ ಸೈನಿಕ ಶಾಲೆಯಲ್ಲಿ ಬೃಹತ್ ನೇಮಕಾತಿ: ಶಿಕ್ಷಕರು ಹಾಗೂ ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    January 10, 2026

    ಸರಗೂರು: ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್  ಮಾದರಿ: ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ

    January 10, 2026

    ಬಿಜಾಪುರ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಸುಧಾಕರ್ ಕೊಳ್ಳುರ ನೇಮಕ

    January 10, 2026
    Facebook Twitter Instagram
    ಟ್ರೆಂಡಿಂಗ್
    • ವಿಜಯಪುರ ಸೈನಿಕ ಶಾಲೆಯಲ್ಲಿ ಬೃಹತ್ ನೇಮಕಾತಿ: ಶಿಕ್ಷಕರು ಹಾಗೂ ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನ
    • ಸರಗೂರು: ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್  ಮಾದರಿ: ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ
    • ಬಿಜಾಪುರ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಸುಧಾಕರ್ ಕೊಳ್ಳುರ ನೇಮಕ
    • ಸರಗೂರು:   ಹಂಚೀಪುರ ಗ್ರಾ. ಪಂ. ಸದಸ್ಯರ ಮೇಲೆ ಹಲ್ಲೆ– ಆರೋಪ
    • ಪಾರದರ್ಶಕ  ಆಡಳಿತ ನಡೆಸಿದ ತೃಪ್ತಿ ನನಗಿದೆ: ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್
    • ನಮ್ಮೂರ  ಶಾಲೆಗಳನ್ನು  ಮುಚ್ಚಲು ಬಿಡುವುದಿಲ್ಲ: ಕೊರಟಗೆರೆಯ ಗುಂಡಿನ ಪಾಳ್ಯದಲ್ಲಿ ಪ್ರತಿಭಟನೆ
    • ನಿಮ್ಮ ಹಲ್ಲುಗಳನ್ನು ರಹಸ್ಯವಾಗಿ ಹಾಳುಮಾಡುತ್ತಿವೆ ಈ 5 ದೈನಂದಿನ ಅಭ್ಯಾಸಗಳು
    • ವಾಟರ್ ಹೀಟರ್ ಬಳಸುವಾಗ ಜೀವಕ್ಕೆ ಕುತ್ತು ಬರಬಹುದು! ಪಾಲಿಸಲೇಬೇಕಾದ ಮುನ್ನೆಚ್ಚರಿಕೆಗಳಿವು…!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪೊಲೀಸರಿಗೆ ನಾಗರಿಕರು ಸಲಹೆ, ಮಾಹಿತಿ ನೀಡಬೇಕು: ಸಿಪಿಐ ಎನ್ ಆನಂದ್ ಮನವಿ
    ಜಿಲ್ಲಾ ಸುದ್ದಿ April 9, 2022

    ಪೊಲೀಸರಿಗೆ ನಾಗರಿಕರು ಸಲಹೆ, ಮಾಹಿತಿ ನೀಡಬೇಕು: ಸಿಪಿಐ ಎನ್ ಆನಂದ್ ಮನವಿ

    By adminApril 9, 2022No Comments2 Mins Read
    hd kote

    ಸರಗೂರು: ನಾಗರಿಕರು ಸಲಹೆ ಸೂಚನೆ ನೀಡುವುದರ ಜೊತೆಗೆ ಪೊಲೀಸರಿಗೆ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಪೋಲಿಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಸಿಪಿಐ ಎನ್ ಆನಂದ್ ಕೋರಿದರು.

    ಪಟ್ಟಣದ ಪೋಲಿಸ್ ಠಾಣೆಯ ಅವರಣದಲ್ಲಿ ಹಮ್ಮಿಕೊಂಡಿದ್ದ ನಾಗರಿಕ ಸಲಹಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿ, ಸಾರ್ವಜನಿಕರಿಂದ ಸಲಹೆ ಸೂಚನೆ ಪಡೆಯಲು ನಾಗರಿಕ ಸಲಹಾ ಸಮಿತಿ ನಡೆಸಲಾಗುತ್ತದೆ. ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದರು.


    Provided by
    Provided by

    ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ಶಾಲಾ ಕಾಲೇಜು ಮಕ್ಕಳು ಶುರುವಾಗ ಹಾಗೂ ಬಿಡುವ ಸಮಯದಲ್ಲಿ ಅಡ್ಡಾದಿಡ್ಡಿಯಾಗಿ ಬಾರಿ ಶಬ್ದ ಮಾಡುವ ಪುಂಡರ ಬೈಕ್ ಗಳಿಗೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಹಾಗೂ ಶಾಲಾ ವಿರ್ಧ್ಯಾಥಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ತಿಳಿಸಿದರು.

    ಪಟ್ಟಣ ಪಂಚಾಯಿತಿ ಸದಸ್ಯ ಎಸ್ ಎಲ್ ರಾಜಣ್ಣ ಮಾತನಾಡಿ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಜಾತ್ರೆಗಳು ಹಬ್ಬಗಳು ಮತ್ತುಮಹಾನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುವ ಕಾರಣ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಜನರು ಒಗ್ಗಟ್ಟಿನಲ್ಲಿ ಹಬ್ಬ ಮತ್ತು ಜಯಂತಿಗಳನ್ನು ಮಾಡುತ್ತಾರೆ ಎಂದರು.

    ಕೆಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಬಿಡದಂತೆ ಕಾನೂನು ಚೌಕಟ್ಟಿನಲ್ಲಿ ನಾವೇಲ್ಲರೂ ಸೇರಿ ಸ್ನೇಹ ಪ್ರೀತಿ ವಿಶ್ವಾಸ ದಿಂದ ಇರೋಣ ಎಂದರು.

    ಸರಗೂರು ತಾಲ್ಲೂಕು ಅಭಿವೃದ್ಧಿ ಹೋರಾಟಗಾರ ಸಮಿತಿ ಸಂಚಾಲಕರು ಸರಗೂರು ಕೃಷ್ಣ ಮಾತನಾಡಿ, ಸರಗೂರು ತಾಲ್ಲೂಕು ಘೋಷಣೆಯಾಗಿ ವರ್ಷಗಳೇ ಕಳೆದಿದ್ದರೂ ಪಟ್ಟಣದಲ್ಲಿ ವೃತ್ತ ನಿರೀಕ್ಷಕರ ಕಚೇರಿ ತೆರೆದಿಲ್ಲ . ತಕ್ಷಣದ ಸಮಸ್ಯೆ ಗಳಿಗೆ ಹೆಚ್ ಡಿ ಕೋಟೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ವೃತ್ತ ನಿರೀಕ್ಷಕರ ಕಛೇರಿ ತೆರೆಯಬೇಕು ಎಂದರು.

    ಗ್ರಾ.ಪಂ. ಸದಸ್ಯ ಹಾದನೂರು ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಾರೆ ಅದರೆ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದರು.

    ಮೂಳ್ಳೂರು ಗ್ರಾಪಂ ಅಧ್ಯಕ್ಷ ಗೊವಿಂದಚಾರಿ ಮಾತನಾಡಿ,  ಪೋಲಿಸ್ ಇಲಾಖೆಯ ಗ್ರಾಮಗಳಿಗೆ ಭಾಗಕ್ಕೆ ಬಿಟ್ ಪೋಲಿಸ್ ಕಾನ್ಸ್ಟೇಬಲ್ ಸಂಜೆ ವೇಳೆ 6 ರಿಂದ ರಾತ್ರಿ 9 ಘಂಟೆ ವರೆಗೆ ಹಳ್ಳಿಗಳಲ್ಲಿ ಮದ್ಯಪಾನ ಮಾರಾಟ ಮಾಡುತ್ತಿರುವ ಅಂಗಡಿ ಗಳಲ್ಲಿ ಕಡಿಮೆಯಾಗುತ್ತದೆ. ಮೂಳ್ಳೂರು ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ಮದ್ಯಪಾನ ಮಾರಾಟ ಮಾಡುತ್ತಾರೆ ಇದರ ಬಗ್ಗೆ ಗಮನ ಹರಿಸಬೇಕು ತಿಳಿಸಿದರು.

    ಇನ್ನೂ ಮುಖಂಡರು ಇಟ್ನರಾಜಣ್ಣ. ಪಪಂ ಉಪಾಧ್ಯಕ್ಷ ವಿನಾಯಕ ಪ್ರಸಾದ್ ಮಲ್ಲೇಶ್. ಗ್ರಾಮ ಗಳಿಂದ ಬಂದಿದ್ದ ಮುಖಂಡರು ಹಳ್ಳಿಯ ಸಮಸ್ಯೆ ಗಳನ್ನು ತಿಳಿಸಿದರು.

    ತಾಲ್ಲೂಕು ವೃತ್ತ ನಿರೀಕ್ಷಕ ರಾದ ಎನ್ ಆನಂದ್ ಮಾತನಾಡಿ, ಸಭೆಯಲ್ಲಿ  ಪಟ್ಟಣದಲ್ಲಿ ಪ್ರತಿದಿನವು ರಾತ್ರಿ ವೇಳೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದು ವೈನ್ ಸ್ಟೋರ್ ಪೆಟ್ರೋಲ್ ಬಂಕ್ ಮತ್ತು ಚಿನ್ನದ ಅಂಗಡಿ ಪ್ರಮುಖ ರಸ್ತೆಗಳಲ್ಲಿರುವ  ಖಾಸಗಿ ಹೋಟೆಲ್ ವಸತಿ ಗೃಹಗಳಲ್ಲಿ ಬಸ್ ನಿಲ್ದಾಣದಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಬೇಕು ಮತ್ತು ಹಳ್ಳಿಗಳಲ್ಲಿ ಮಧ್ಯ ಪಾನ ಮಾರಾಟ ಮಾಡುತ್ತಿರುವ ಬಗ್ಗೆ ಅಂಗಡಿ ಮಾಲೀಕರು ಮೇಲೆ ಕೈಗೊಳ್ಳುತ್ತಿವಿ ಎಂದು ಹೇಳಿದರು.

    ಸಭೆಯಲ್ಲಿ ಪಿಎಸ್ ಐ ಶ್ರಾವಣದಾಸ ರೆಡ್ಡಿ, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಪಪಂ ಸದಸ್ಯರು ರಾಜಣ್ಣ, ಚೈತ್ರ ಸ್ವಾಮಿ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವಣ್ಣ, ಸರಗೂರು ಅಭಿವೃದ್ಧಿ ಹೊರಾಟಗಾರ ಸಮಿತಿ ಸಂಚಾಲಕ ಸರಗೂರು ಕೃಷ್ಣ, ಗ್ರಾಮೀಣ ಮಹೇಶ್, ಮೂಳ್ಳೂರು ಗ್ರಾ.ಪಂ. ಅಧ್ಯಕ್ಷ ಗೊವಿಂದಚಾರಿ, ಹಾದನೂರು ಗ್ರಾಪಂ ಸದಸ್ಯರು ಪ್ರಕಾಶ್ , ಶಿವರಾಜ್ ಅರಸು, ಭಾಗ್ಯಕೇಂಪಸಿದ್ದ, ರಾಜೇಶ್ ಮುಖಂಡರು ಮಲ್ಲೇಶ್, ಸುನಂದರಾಜು, ಇಟ್ನರಾಜಣ್ಣ,  ಚಿನ್ನಯ್ಯ, ವೆಂಕಟಪ್ಪ, ವರ್ತಕರ ಸಂಘದ ಅಧ್ಯಕ್ಷ ಶ್ರೀನಿವಾಸನ್, ಮಾ ಪಪಂ ಸದಸ್ಯ ನಾಗಯ್ಯ, ಬಿಡುಗಲು ಶಿವಣ್ಣ ಹಾಗೂ ಗ್ರಾಮದ ಮುಖಂಡರು ಭಾಗಿಯಾಗಿದ್ದರು.

    ವರದಿ: ಚಂದ್ರ ಹಾದನೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಸರಗೂರು: ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್  ಮಾದರಿ: ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ

    January 10, 2026

    ಬಿಜಾಪುರ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಸುಧಾಕರ್ ಕೊಳ್ಳುರ ನೇಮಕ

    January 10, 2026

    ಸರಗೂರು:   ಹಂಚೀಪುರ ಗ್ರಾ. ಪಂ. ಸದಸ್ಯರ ಮೇಲೆ ಹಲ್ಲೆ– ಆರೋಪ

    January 10, 2026

    Leave A Reply Cancel Reply

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಉದ್ಯೋಗ

    ವಿಜಯಪುರ ಸೈನಿಕ ಶಾಲೆಯಲ್ಲಿ ಬೃಹತ್ ನೇಮಕಾತಿ: ಶಿಕ್ಷಕರು ಹಾಗೂ ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    January 10, 2026

    ವಿಜಯಪುರ: ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯಪುರ (ಬಿಜಾಪುರ) ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಿವಿಧ ಬೋಧಕ ಮತ್ತು…

    ಸರಗೂರು: ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್  ಮಾದರಿ: ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ

    January 10, 2026

    ಬಿಜಾಪುರ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಸುಧಾಕರ್ ಕೊಳ್ಳುರ ನೇಮಕ

    January 10, 2026

    ಸರಗೂರು:   ಹಂಚೀಪುರ ಗ್ರಾ. ಪಂ. ಸದಸ್ಯರ ಮೇಲೆ ಹಲ್ಲೆ– ಆರೋಪ

    January 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.