ಹಲಗೂರು: ಹಣ ಮತ್ತು ಚಿನ್ನಾಭರಣದ ಆಸೆಗಾಗಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಲಗೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಅಂಚೆ ಪಾಳ್ಯ ಪೋಸ್ಟ್, ಚಳ್ಳಘಟ್ಟ ವಾಸಿ ಲಕ್ಷ್ಮಿ ಮತ್ತು ಬೆಂಗಳೂರಿನ ಗೊಲ್ಲಹಳ್ಳಿ ನಾರಾಯಣ ಬಂಧಿತ ಆರೋಪಿಗಳಾಗಿದ್ದಾರೆ.
ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕೊಲೆ ನಡೆದಿತ್ತು. ಆದರೆ ಹತ್ಯೆಗೀಡಾದ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮತ್ತು ಅಪರ ಜಿಲ್ಲಾ ಪೊಲೀಸ್ ಅಧಿಕ್ಷಕರ ಮಂಡ್ಯ ಜಿಲ್ಲೆ ಮಾರ್ಗದರ್ಶನ ಮತ್ತು ಸೂಚನೆಯ ಮೇರೆಗೆ ನಾಪತ್ತೆಯಾದ ಮಹಿಳೆಯರ ಪ್ರಕರಣಗಳನ್ನು ಪತ್ತೆ ಮಾಡಲಾಗಿತ್ತು. ಈ ವೇಳೆ ಬೆಂಗಳೂರು ನಗರ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವ ಶೋಭಾ ಎಂಬ ಮಹಿಳೆಯ ಚಹರೆಗೆ ಹೋಲಿಕೆ ಕಂಡು ಬಂದಿತ್ತು.
ತಕ್ಷಣವೇ ತನಿಖೆ ಚುರುಕುಗೊಳಿಸಿದ ಪೊಲೀಸರು ನಾಪತ್ತೆಯಾದ ಮಹಿಳೆಯ ಮೊಬೈಲ್ ನಂಬರ್ ಮಾಹಿತಿ ಪಡೆದುಕೊಂಡು ಮೃತಳ ಕಾಲ್ ರೆಕಾರ್ಡ್ ಪರಿಶೀಲನೆ ನಡೆಸಿದ್ದು, ಈ ವೇಳೆ ಆರೋಪಿಗಳ ಸುಳಿವು ಲಭ್ಯವಾಗಿತ್ತು.
ಶೋಭಾ ಅವರಿಗೆ ಚಿನ್ನಾಭರಣಗಳನ್ನು ಮೈ ಮೇಲೆ ಧರಿಸಿಕೊಂಡು, ಶ್ರೀಮಂತರಂತೆ ನಡೆಯುವ ಹವ್ಯಾಸವಿತ್ತು. ಈಕೆಯನ್ನು ಹತ್ಯೆ ಮಾಡಿದರೆ, ಆಕೆಯ ಬಳಿ ಇದ್ದ ಚಿನ್ನಾಭರಣಗಳನ್ನು ಕಳವು ಮಾಡಬಹುದು ಎನ್ನುವ ಉದ್ದೇಶದಿಂದ ಆರೋಪಿಗಳಾದ ಲಕ್ಷ್ಮಿ ಮತ್ತು ನಾರಾಯಣ, ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಗಾಣಾಳು ಸಮೀಪದ ಮುಳ್ಳಯ್ಯನಕಟ್ಟೆ ಬಳಿ ನೇಣು ಬಿಗಿದು ಹತ್ಯೆ ನಡೆಸಿದ್ದು, ನಂತರ ನಾರಾಯಣ ಮಹಿಳೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ.
ಈ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರ ತಂಡಕ್ಕೆ, ಸಿಬ್ಬಂದಿ ವರ್ಗಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಳವಳ್ಳಿ ಉಪವಿಭಾಗದ ಡಿ.ವೈ.ಎಸ್.ಪಿ ನವೀನ್ ಕುಮಾರ್, ಹಲಗೂರು ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್.ಶ್ರೀಧರ್, ಹಲಗೂರು ಪಿಎಸ್ಐ ಡಿ.ರವಿಕುಮಾರ್, ಅನ್ನಪೂರ್ಣ, ರಂಗಪ್ಪ ಸಾಲಾಪೂರ್ ಸಿಬ್ಬಂದಿಗಳಾದ ರಿಯಾಜ್ ಪಾಷಾ, ಸಿದ್ದರಾಜು, ರಫೀಕ್ ನದಾಫ್, ಚಿದಂಬರ, ಮೊಹಮದ್ ಫಾರೂಕ್, ಮಲ್ಲಿಕಾರ್ಜುನ ಚುಳಕಿ, ಜಯಕುಮಾರ್, ಸಿದ್ದೇಗೌಡ ಸೇರಿದಂತೆ ಹಲವರು ಇದ್ದರು.
ವರದಿ : ಮಂಡ್ಯ ಶ್ರೀನಿವಾಸ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz