ಪ್ರಜ್ವಲ್ ದೇವರಾಜ್ ಮತ್ತು ಮೇಘನಾರಾಜ್ ಅಭಿನಯದ ‘ತತ್ಸಮ ತದ್ಭವ’ ಚಿತ್ರವನ್ನು ಬೆಂಗಳೂರಿನ ಪೊಲೀಸ್ ಕಮಿಷನರ್ ಬಿ. ದಯಾನಂದ್ ಮತ್ತು 5 ಡಿಸಿಪಿಗಳು ಸೇರಿದಂತೆ 250 ಪೊಲೀಸ್ ಸಿಬ್ಬಂದಿಗಳು ಸಿನಿಮಾ ವೀಕ್ಷಿಸಿದ್ದು, ಅವರೆಲ್ಲಾ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಯೇ ಪ್ರಧಾನವಾಗಿರುವ ಈ ಸೈಕಲಾಜಿಕಲ್ ಕೈಮ್ ಥಿಲ್ಲರ್ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಪೊಲೀಸ್ ಅಧಿಕಾರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ. ವಿಶಾಲ್ ಆತ್ರೇಯ ನಿರ್ದೇಶನದ ಸಿನಿಮಾ ಇದಾಗಿದ್ದು, ಪನ್ನಗಭರಣ ನಿರ್ಮಿಸಿದ್ದಾರೆ.
ವರದಿ : ಆಂಟೋನಿ ಬೇಗೂರು


