ಬೆಂಗಳೂರು: ಕೇಂದ್ರ ವಾಣಿಜ್ಯ ಪ್ರದೇಶದಲ್ಲಿರುವ (ಸಿಬಿಡಿ) ಹಲವು ಪಬ್ ಗಳ ಮೇಲೆ ಕೇಂದ್ರ ವಿಭಾಗದ ಪೊಲೀಸರು ಶನಿವಾರ ಮಧ್ಯ ರಾತ್ರಿ ದಾಳಿ ಮಾಡಿದ್ದು, ನಿಯಮ ಉಲ್ಲಂಘನೆ ಆರೋಪದಡಿ 20 ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಚರ್ಚ್‌ಸ್ಟ್ರೀಟ್, ಎಂ. ಜಿ. ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಸುತ್ತಮುತ್ತಲಿನ ಹಲವು ಪಬ್ ಗಳಿಂದ ನಿಯಮ ಉಲ್ಲಂಘನೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ವಿಶೇಷ ತಂಡಗಳನ್ನು ರಚಿಸಿ, ಎಲ್ಲ ಪಬ್‌ಗಳ ಮೇಲೆ ದಾಳಿ ಮಾಡಿ ಪರಿಶೀಲಿಸಲಾಯಿತು’ ಎಂದು ಪೊಲೀಸರು ಹೇಳಿದರು.


