ತುರುವೇಕೆರೆ: ತಾನು ಸಾಕಿದ್ದ ಹಸು ತೀರಿಕೊಂಡಾಗ ಅದನ್ನು ಮನುಷ್ಯರಂತೆ ಅಂತ್ಯಸಂಸ್ಕಾರ ನೆರವೇರಿಸಿ ಬಡ ರೈತ ಕೋಳಘಟ್ಟ ಗ್ರಾಮದ ಕಂಚಿ ರಾಯಪ್ಪ ಮತ್ತು ಲಕ್ಷ್ಮೀದೇವಮ್ಮ ಎಂಬ ದಂಪತಿಗಳು ಮಾನವೀಯತೆ ಮೆರೆದಿದ್ದಾರೆ.
ಈ ರೈತ ದಂಪತಿಗಳು ಸಾಕಿದ್ದ ಹಸು ವಯಸ್ಸಾಗಿ ತೀರಿಕೊಂಡಿದ್ದರಿಂದ ಹಂಚಿರಾಯಪ್ಪ ದಂಪತಿಗಳು ತಮ್ಮ ಹಸುವಿಗೆ ಮನುಷ್ಯರಿಗೆ ಹೇಗೆ ಅಂತ್ಯಸಂಸ್ಕಾರ ನಡೆಸುತ್ತಾರೋ ಅದೇ ರೀತಿಯಲ್ಲಿ ನಡೆಸಿ ಎಲ್ಲಾ ಕಾರ್ಯಗಳನ್ನು ನಡೆಸಿ ಸಂಸ್ಕಾರ ಮಾಡಿದ್ದಾರೆ.
ಈ ದಂಪತಿ ಹಸುವಿಗೆ ಅಂತ್ಯಸಂಸ್ಕಾರ ನೆರವೇರಿಸಿ ಊರಿನ ಜನರೊಂದಿಗೆ ಸೇರಿ ಅದಕ್ಕೆ ಹಾಲು ತುಪ್ಪ ಹಾಕಿ ದುಃಖದಿಂದ ರೋಧಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಮನೆಯ ಸದಸ್ಯರನ್ನು ಅಗಲಿದಾಗ ಹೇಗೆ ದುಃಖಿಸುತ್ತಾರೋ ಅದರಂತೆಯೇ ಈ ದಂಪತಿ ಹಸುವಿಗಾಗಿ ಕಣ್ಣೀರು ಹಾಕಿದರು.
ಹಸುವಿಗೆ ತಿಥಿ ಕಾರ್ಯ ಕಾರ್ಯವನ್ನು ಸಹ ನೆರವೇರಿಸಿ ತಮ್ಮ ಬಂಧು ಮತ್ತು ಮಿತ್ರರಿಗೆ ಹಾಗೂ ಗ್ರಾಮಸ್ಥರುಗಳಿಗೆ ಊಟವನ್ನು ಹಾಕಿಸಿದ್ದಾರೆ. ಇವರು ಬರೋಬ್ಬರಿ 15ಕ್ಕೂ ಹೆಚ್ಚು ಹಸುಗಳನ್ನು ಸಾಕಿದ್ದಾರೆ. ಮೂಕ ಪ್ರಾಣಿಗಳ ಮೇಲಿನ ಇವರ ಪ್ರೀತಿ ಮೆಚ್ಚುವಂತಹದ್ದು.
ವರದಿ: ಸುರೇಶ್ ಬಾಬು ಎಂ, ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA